

ಮೇಷ: ಸಾಲ ಮರುಪಾವತಿ. ಕೆಲಸ ಕಾರ್ಯಗಳಲ್ಲಿ ವಿಳಂಬ. ಮನಕ್ಲೇಷ. ಆಪ್ತರೊಡನೆ ಮಾತುಕತೆ, ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 9
ವೃಷಭ: ಕುಟುಂಬದ ವಿಷಯಗಳು ಇತ್ಯರ್ಥ. ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗುವಿರಿ. ಪ್ರೀತಿ ಪಾತ್ರರೊಡನೆ ಬಾಂಧವ್ಯ. ಶುಭಸಂಖ್ಯೆ: 1
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಅನಿರೀಕ್ಷಿತ ಖರ್ಚು ತಲೆದೋರಬಹುದು. ಶತ್ರು ಬಾಧೆ. ಉದ್ಯಮಿಗಳಿಗೆ ಅಲ್ಪ ಲಾಭ. ಶುಭಸಂಖ್ಯೆ: 5
ಕಟಕ: ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ. ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಆತಂಕ ಹೆಚ್ಚುವುದು. ಶುಭಸಂಖ್ಯೆ: 3
ಸಿಂಹ: ಮಾತಾಪಿತರಲ್ಲಿ ಪ್ರೀತಿ ತೋರುವಿರಿ. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ. ಕುಲದೇವರ ಪೂಜೆಯಿಂದ ಅನುಕೂಲ. ಶುಭಸಂಖ್ಯೆ: 8
ಕನ್ಯಾ: ಸ್ತ್ರೀಯರಿಂದ ಸಕಾಲಿಕ ಸಹಾಯ. ದಾಂಪತ್ಯದಲ್ಲಿ ಪ್ರೀತಿ, ಸಂತಸ. ದುಷ್ಟ ಜನರಿಂದ ದೂರವಿರಿ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 2
ತುಲಾ: ದುಂದುವೆಚ್ಚಗಳಿಗೆ ಕಡಿವಾಣ ಹಾಕಿ. ಶತ್ರು ಬಾಧೆ ನಿವಾರಣೆ. ಮನಃಶಾಂತಿ. ವಿದ್ಯಾರ್ಥಿಗಳಲ್ಲಿ ಗೊಂದಲ. ಅಕಾಲ ಭೋಜನ. ಶುಭಸಂಖ್ಯೆ: 6
ವೃಶ್ಚಿಕ: ನಿರೀಕ್ಷೆಗೆ ತಕ್ಕ ಆದಾಯ. ಸಣ್ಣಪುಟ್ಟ ತೊಂದರೆಗಳಿಂದ ಅಸಮಾಧಾನವಾಗುವುದು. ಮನಕ್ಲೇಷ, ಉತ್ತಮ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 7
ಧನುಸ್ಸು: ಸ್ವಯಂ ಸಾಮರ್ಥ್ಯದಿಂದ ಅವಕಾಶ ದೊರೆಯುವುದು. ಅಧಿಕ ಖರ್ಚು, ವ್ಯವಹಾರಗಳಲ್ಲಿ ಜಾಣ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 5
ಮಕರ: ಸರ್ಕಾರಿ ಕೆಲಸಗಳಿಗೆ ಓಡಾಟ ಅನಿವಾರ್ಯ. ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಬಡ್ತಿ, ಧನಲಾಭ. ಶುಭಸಂಖ್ಯೆ: 4
ಕುಂಭ: ಚಂಚಲ ಸ್ವಭಾವ ನಿಯಂತ್ರಿಸಿಕೊಳ್ಳಿ. ಅನಾರೋಗ್ಯ, ಆಲಸ್ಯ, ಬಂಧು ಮಿತ್ರರಲ್ಲಿ ವಿರೋಧ. ಮನೋವ್ಯಥೆ ಕಾಡುವುದು. ಶುಭಸಂಖ್ಯೆ:1
ಮೀನ: ಮಾಡಿದ ಕಾರ್ಯಗಳಿಂದ ಪಶ್ಚಾತಾಪ ಪಡುವಿರಿ. ಅತಿಯಾದ ನಿದ್ರೆ. ನಂಬಿಕೆ ದ್ರೋಹ. ಅಪರಿಚಿತರಿಂದ ದೂರವಿರಿ. ಶುಭಸಂಖ್ಯೆ: 9