

ಮೇಷ: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ. ವಾಹನದಿಂದ ಅಪಾಯ. ಉದ್ಯೋಗದಲ್ಲಿ ಲಾಭ. ಮಕ್ಕಳಿಂದ ಶುಭವಾರ್ತೆ. ಶುಭಸಂಖ್ಯೆ: 6
ವೃಷಭ: ಅನಾರೋಗ್ಯ ಕಾಡೀತು, ಗಮನವಿರಲಿ. ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ. ವಿದ್ಯಾರ್ಥಿಗಳಿಗೆ ಪ್ರಗತಿ. ವಸ್ತ್ರಾಭರಣ ಖರೀದಿ. ಶುಭಸಂಖ್ಯೆ:1
ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆಯಾದೀತು. ಮನೆಗೆ ಆತ್ಮೀಯರ ಆಗಮನ. ವ್ಯಾಪಾರಸ್ಥರಿಗೆ ಲಾಭದಾಯಕವಾದ ದಿನ. ಶುಭಸಂಖ್ಯೆ: 9
ಕಟಕ: ವ್ಯರ್ಥ ಕಾಲಹರಣ ಮಾಡುವುದು ಒಳ್ಳೆಯದಲ್ಲ. ನ್ಯಾಯಾಲಯದಲ್ಲಿ ಜಯ. ಮಕ್ಕಳ ವಿಚಾರದಲ್ಲಿ ವಿಶೇಷ ಗಮನವಿರಲಿ. ಶುಭಸಂಖ್ಯೆ:2
ಸಿಂಹ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಹೊಸ ಉದ್ಯೋಗ ದೊರೆಯಬಹುದು. ದಂಪತಿಗಳ ಮಧ್ಯೆ ಸಾಮರಸ್ಯ. ಶುಭಸಂಖ್ಯೆ:7
ಕನ್ಯಾ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ನೀರಿನಿಂದ ಅಪಾಯವಿದೆ, ಜಾಗ್ರತೆಯಿಂದಿರಿ. ಪ್ರಯಾಣದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ:2
ತುಲಾ: ಹಣಕಾಸಿನ ಮುಗ್ಗಟ್ಟು ಎದುರಾದೀತು. ಸ್ನೇಹಿತರ ಮಧ್ಯೆ ಕಲಹ ಏರ್ಪಡುವ ಸಂಭವವಿದೆ, ಸಮಾಧಾನಿಸಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:3
ವೃಶ್ಚಿಕ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ಪುಸ್ತಕ ವ್ಯಾಪಾರಸ್ಥರಿಗೆ ಲಾಭ ಬರಲಿದೆ. ಶುಭಸಂಖ್ಯೆ: 8
ಧನುಸ್ಸು: ಮಾನಸಿಕ ಒತ್ತಡವು ಹೆಚ್ಚುತ್ತದೆ, ಧ್ಯಾನದ ಮೊರೆಹೋಗಿ. ಸಾಕುಪ್ರಾಣಿಗಳಿಂದ ತೊಂದರೆ. ದೂರ ಪ್ರಯಾಣದ ಯೋಗ. ಶುಭಸಂಖ್ಯೆ:6
ಮಕರ: ತಂದೆತಾಯಿಗಳ ಆರೋಗ್ಯದ ಬಗ್ಗೆ ಎಚ್ಚರ. ವಿದ್ಯಾರ್ಥಿಗಳಿಗೆ ಪ್ರಗತಿ. ವ್ಯವಹಾರದಿಂದ ನಷ್ಟ. ಹಿತ ಶತ್ರುಗಳ ಬಗ್ಗೆ ಎಚ್ಚರ. ಶುಭಸಂಖ್ಯೆ:1
ಕುಂಭ: ಆಕಸ್ಮಿಕ ಧನಾಗಮನವಾಗಲಿದೆ. ಅಧಿಕಾರಿಗಳಿಂದ ಕಿರಿಕಿರಿ. ಮನೆಗೆ ಬಂಧುಮಿತ್ರರ ಆಗಮನ. ಕೃಷಿಕರಿಗೆ ಶುಭಫಲ. ಶುಭಸಂಖ್ಯೆ: 5
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಒಳ್ಳೆಯ ದಿನ. ಹಣ್ಣು ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಕೈಕಾಲುಗಳಿಗೆ ಪೆಟ್ಟಾದೀತು, ಜಾಗ್ರತೆ. ಶುಭಸಂಖ್ಯೆ: 6