More

  ಚಿತ್ರರಂಗದ ಮಂದಿಗೆ ಸಂತಸದ ಸುದ್ದಿ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

  ನವದೆಹಲಿ: ಚಿತ್ರರಂಗದ ಮಂದಿಗೆ ಸಂತಸ ಉಂಟು ಮಾಡುವಂಥ ಹಾಗೂ ನಿರಾಳತೆಯನ್ನು ತರುವಂಥ ಸುದ್ದಿಯೊಂದು ಹೊರಬಿದ್ದಿದೆ. ಕನ್ನಡ ಮಾತ್ರವಲ್ಲದೆ ಎಲ್ಲ ಭಾಷೆಯ ಚಿತ್ರರಂಗಕ್ಕೂ ಇದು ಸಂತಸದ ಸುದ್ದಿಯಾಗಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರದಿಂದಾಗಿ ಇಂಥದ್ದೊಂದು ಸಂತಸ-ನಿರಾಳತೆ ಉಂಟಾಗಿದೆ.

  ಚಿತ್ರರಂಗವನ್ನು ತೀವ್ರವಾಗಿ ಕಾಡುತ್ತಿರುವ ಪೈರಸಿ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಳೆದಿರುವ ನಿಲುವೇ ಚಿತ್ರರಂಗದವರ ಈ ಸಂತಸಕ್ಕೆ ಕಾರಣ. ಪೈರಸಿ ವಿರುದ್ಧ ದೂರುಗಳನ್ನು ಸ್ವೀಕರಿಸಲು ಮತ್ತು ಅಂಥ ಪೆರೇಟೆಡ್ ಕಂಟೆಂಟ್​ಗಳನ್ನು ಡಿಜಿಟಲ್ ವೇದಿಕೆಗಳಿಂದ ತೆಗೆದುಹಾಕಲು ನೋಡಲ್ ಅಧಿಕಾರಿಗಳು ಮಧ್ಯವರ್ತಿಗಳಿಗೆ ನಿರ್ದೇಶನ ನೀಡುವ ಸಾಂಸ್ಥಿಕ ಕಾರ್ಯತಂತ್ರವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸ್ಥಾಪಿಸಿದೆ.

  ಇದನ್ನೂ ಓದಿ: ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

  ಅಂದರೆ ಪೈರಸಿ ಮಾಡಿದ ಸಿನಿಮಾ ಕಟೆಂಟ್‌ ಇರುವ ವೆಬ್​ಸೈಟ್ ಅಥವಾ ಆ್ಯಪ್ ಇಲ್ಲವೇ ಲಿಂಕ್ ಬ್ಲಾಕ್ ಮಾಡುವ ಅಥವಾ ಅದನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಲು ಸಿಬಿಎಫ್​ಸಿ ಮತ್ತು ಐ ಆ್ಯಂಡ್​ ಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಅಧಿಕಾರ ನೀಡಲಾಗಿದೆ. ನೋಡಲ್ ಅಧಿಕಾರಿಗಳು ನಿರ್ದೇಶನ ನೀಡಿದ 48 ಗಂಟೆಗಳ ಒಳಗೆ ಪೈರೆಟೆಡ್ ಕಂಟೆಂಟ್‌ ಒಳಗೊಂಡ ಲಿಂಕ್ ತೆಗೆದು ಹಾಕುವುದು ಕಡ್ಡಾಯವಾಗಿದೆ.

  ಸದ್ಯ ಹಕ್ಕುಸ್ವಾಮ್ಯ(ಕಾಪಿರೈಟ್) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದನ್ನು ಹೊರತುಪಡಿಸಿ ಪೈರೇಟೆಡ್ ಕಂಟೆಂಟ್​ಗಳ ಮೇಲೆ ನೇರವಾಗಿ ಕ್ರಮ ತೆಗೆದುಕೊಳ್ಳಲು ಯಾವುದೇ ಸಾಂಸ್ಥಿಕ ಕಾರ್ಯ ವಿಧಾನ ಇಲ್ಲದಿರುವುದರಿಂದ ಈ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

  ಇದನ್ನೂ ಓದಿ: ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

  ಅಂತರ್ಜಾಲ ಪ್ರಸರಣ ವ್ಯಾಪಕ ಆಗಿರುವುದರಿಂದ ಮತ್ತು ಬಹುತೇಕ ಎಲ್ಲರೂ ಚಲನಚಿತ್ರ ಕಟೆಂಟ್ ಉಚಿತವಾಗಿ ವೀಕ್ಷಿಸಲು ಆಸಕ್ತಿ ಹೊಂದಿರುವುದರಿಂದ, ಪೈರಸಿಯಲ್ಲಿ ಭಾರಿ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಅದರಲ್ಲೂ ಪೈರಸಿಯಿಂದ ಉದ್ಯಮಕ್ಕೆ ವಾರ್ಷಿಕ 20,000 ಕೋಟಿ ರೂ. ನಷ್ಟವಾಗುತ್ತಿದೆ. ಹೀಗಾಗಿ ಈ ಕ್ರಮದಿಂದಾಗಿ ಉದ್ಯಮಕ್ಕೆ ಅನುಕೂಲ ಆಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  ಇದನ್ನೂ ಓದಿ: ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

  ಯಾರು ಅರ್ಜಿ ಸಲ್ಲಿಸಬಹುದು?: ಮೂಲ ಹಕ್ಕುಸ್ವಾಮ್ಯ ಹೊಂದಿರುವವರು ಅಥವಾ ಈ ಉದ್ದೇಶಕ್ಕಾಗಿ ಅವರಿಂದ ನಿಯೋಜಿಸ್ಪಲ್ಪಟ್ಟ ಯಾವುದೇ ವ್ಯಕ್ತಿ ಪೈರೆಟೆಡ್ ಕಂಟೆಂಟ್ ತೆಗೆದುಹಾಕಲು ನೋಡಲ್ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದು. ದೂರು ಸ್ವೀಕರಿಸಿದ ಬಳಿಕ ನೋಡಲ್ ಅಧಿಕಾರಿಯು ಯಾವುದೇ ನಿರ್ದೇಶನಗಳನ್ನು ನೀಡುವ ಮುನ್ನ ದೂರಿನ ನೈಜತೆ ನಿರ್ಧರಿಸಲು ಪ್ರತಿ ಪ್ರಕರಣಗಳಲ್ಲಿ ಅವುಗಳ ಆಧಾರದ ಮೇಲೆ ವಿಚಾರಣೆಗಳನ್ನು ನಡೆಸಬಹುದು.

  ಇಬ್ಬರ ಮಧ್ಯೆ ಮನಸ್ತಾಪ ಬಂದ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ: ಹೈಕೋರ್ಟ್

  ಬೆಟ್ಟಿಂಗ್​ ಆ್ಯಪ್​ನಿಂದಲೂ ಚುನಾವಣೆಗೆ ಹಣ!; ದೊಡ್ಡ ಮೊತ್ತವನ್ನೇ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts