ಈ ರಾಶಿಯವರಿಗಿಂದು ಸಾಲದಿಂದ ಮುಕ್ತಿ, ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ವಪ್ರಯತ್ನದಿಂದ ಕಾರ್ಯಸಿದ್ಧಿ. ವ್ಯವಹಾರದಲ್ಲಿ ಮಾತಿನ ಚಕಮಕಿ. ಅನವಶ್ಯಕ ವಸ್ತುಗಳ ಖರೀದಿ. ಸಾಲದಿಂದ ಮುಕ್ತಿ. ಶುಭಸಂಖ್ಯೆ: 9

ವೃಷಭ: ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಬರಲಿದೆ. ಮಾನಸಿಕ ಗೊಂದಲ ಕಾಡಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆತು ಸಮಾಧಾನ. ಶುಭಸಂಖ್ಯೆ: 1

ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಸಿಗುವ ಸಂಭ್ರಮ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ. ಪ್ರತಿಭೆಗೆ ತಕ್ಕ ಗೌರವ ಸಿಗುವುದು. ಶುಭಸಂಖ್ಯೆ: 5

ಕಟಕ: ಕಾರ್ಯಗಳಲ್ಲಿ ಜಯ. ನೆರೆಯವರ ಬಳಿ ಸೌಜನ್ಯದಿಂದ ವರ್ತಿಸುವುದು ಅಪೇಕ್ಷಣೀಯ. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 6

ಸಿಂಹ: ವ್ಯಾಸಂಗಕ್ಕೆ ತೊಂದರೆ. ಶತ್ರುಭಯ. ಕುಲ ದೇವರನ್ನು ಪೂಜಿಸಿ. ತೀರ್ಥೇತ್ರ ದರ್ಶನ. ಅತಿಯಾದ ನಿದ್ರೆ ಬೇಡ. ಭೂಲಾಭ. ಶುಭಸಂಖ್ಯೆ: 3

ಕನ್ಯಾ: ರಿಯಲ್​ ಎಸ್ಟೇಟ್​ನವರಿಗೆ ಲಾಭ. ವಿವಾಹಕ್ಕೆ ಅಡಚಣೆ. ವಾಹನದಿಂದ ಅಪಘಾತ ಉಂಟಾಗುವ ಸಾಧ್ಯತೆ. ಸಾಲ ಮಾಡುವ ಸಂಭವ. ಶುಭಸಂಖ್ಯೆ: 7

ತುಲಾ: ಮನಸ್ಸಿಗೆ ಶಾಂತಿ ಸಿಗುವುದು. ಧನಲಾಭವಾಗಲಿದೆ. ಸುಖ ಭೋಜನ ಪ್ರಾಪ್ತಿ. ಮನಕ್ಲೇಷ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 9

ವೃಶ್ಚಿಕ: ಸಲ್ಲದ ಅಪವಾದ ಬರಬಹುದು. ಉದ್ಯೋಗದಲ್ಲಿ ತೊಂದರೆ. ಅನಾರೋಗ್ಯ. ಬಂಧುಗಳಿಂದ ಕಿರಿಕಿರಿ. ವಿಪರೀತ ವ್ಯಸನ ಸಲ್ಲದು. ಶುಭಸಂಖ್ಯೆ: 4

ಧನುಸ್ಸು: ಸಾಲದಿಂದ ಮುಕ್ತಿ . ದ್ರವ್ಯಲಾಭ. ವಿದ್ಯಾಭ್ಯಾಸದಲ್ಲಿ ಪ್ರಗತಿ. ದೂರ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು. ಶುಭಸಂಖ್ಯೆ: 8

ಮಕರ: ಶುಭ ಕಾರ್ಯಗಳಲ್ಲಿ ಭಾಗಿ. ನಂಬಿದ ಜನರಿಂದ ಮೋಸ. ಆಲಸ್ಯ. ಶೀತ ಸಂಬಂಧೀ ರೋಗ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಶುಭಸಂಖ್ಯೆ: 4

ಕುಂಭ: ಶುಭ ವಾರ್ತೆ. ಅಧಿಕಾರಿಗಳಲ್ಲಿ ಕಲಹ. ಸ್ತ್ರೀಯರಿಂದ ಸಹಾಯ. ಮಿತ್ರರಲ್ಲಿ ದ್ವೇಷ. ಅನಾರೋಗ್ಯ. ನಿಂದನೆಯಿಂದ ಬೇಸರ. ಶುಭಸಂಖ್ಯೆ: 2

ಮೀನ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ. ನೀಚ ಜನರಿಂದ ತೊಂದರೆ. ಎಚ್ಚರ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಭೂಮಿ ಕೊಳ್ಳುವಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net