

ಮೇಷ: ನೇರ ನಡವಳಿಕೆಯಿಂದ ಕಚೇರಿಯಲ್ಲಿ ತೊಂದರೆ. ಆರ್ಥಿಕ ಸಂಕಷ್ಟ ದೂರವಾಗುತ್ತದೆ. ನಿಂತ ವ್ಯವಹಾರ ಆರಂಭಗೊಳ್ಳುತ್ತದೆ. ಶುಭಸಂಖ್ಯೆ: 6
ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ. ಸಂಗಾತಿಯ ಆರೋಗ್ಯದಲ್ಲಿ ಎಚ್ಚರ. ವಿದ್ಯಾರ್ಥಿಗಳಿಗೆ ಸಹಾಯ ದೊರೆಯುತ್ತದೆ. ಶುಭಸಂಖ್ಯೆ:2
ಮಿಥುನ: ರೈತರಿಗೆ ಶುಭದಿನ. ಆರ್ಥಿಕ ಉಳಿತಾಯದಲ್ಲಿ ಹಿನ್ನಡೆಯಾಗುವುದು. ಕೋಪವನ್ನು ನಿಯಂತ್ರಿಸಿ ಕೊಳ್ಳುವುದಕ್ಕೆ ಆದ್ಯತೆ ನೀಡಿ. ಶುಭಸಂಖ್ಯೆ: 6
ಕಟಕ: ಮನೆ ಕಟ್ಟುವ ಯೋಜನೆ ಮುಂದೂಡಿ. ಧೈರ್ಯ ಹೆಚ್ಚುತ್ತದೆ. ನೆಂಟರಿಷ್ಟರ ಆಗಮನ. ಆದಾಯದಲ್ಲಿ ಹೆಚ್ಚಳವಾಗಿ ಸಮಾಧಾನ. ಶುಭಸಂಖ್ಯೆ: 6
ಸಿಂಹ: ಬಹುದಿನದಿಂದ ಬಾಕಿಯಾಗಿದ್ದ ಹಣ ಕೈಸೇರುವುದು. ಆರೋಗ್ಯದಲ್ಲಿ ಏರುಪೇರು. ವ್ಯಾಪಾರಸ್ಥರಿಗೆ ಉತ್ತಮ ಆದಾಯವಿದೆ. ಶುಭಸಂಖ್ಯೆ: 9
ಕನ್ಯಾ: ಕಾರ್ಯಸಾಧನೆಗಾಗಿ ತಿರುಗಾಟ ಮಾಡಬೇಕಾಗುವುದು. ಆಪ್ತರಿಂದ ಸಹಾಯ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 2
ತುಲಾ: ಸಹವರ್ತಿಗಳಿಂದ ತೊಂದರೆ ಅನುಭವಿಸಬೇಕಾ ದೀತು. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ಆಕಸ್ಮಿಕ ಧನ ನಷ್ಟ ಅನುಭವಿಸುವಿರಿ. ಶುಭಸಂಖ್ಯೆ: 6
ವೃಶ್ಚಿಕ: ಸ್ನೇಹಿತರೆ ಶತ್ರುಗಳಾಗುತ್ತಾರೆ, ಎಚ್ಚರದಿಂದಿರಿ. ಯಾವುದೇ ಸಂದರ್ಭದಲ್ಲೂ ತಾಳ್ಮೆ ಅಗತ್ಯ. ನ್ಯಾಯಾಲಯ ತೀರ್ಪಿನಲ್ಲಿ ಜಯ. ಶುಭಸಂಖ್ಯೆ: 6
ಧನುಸ್ಸು: ಹಣ ಬಂದರೂ ಉಳಿಯುವುದಿಲ್ಲ. ದೂರ ಪ್ರಯಾಣದ ಅನಿವಾರ್ಯತೆ. ಅಧಿಕಾರ-ಪ್ರಾಪ್ತಿ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ:3
ಮಕರ: ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು ಆಗಬಹುದು. ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಮುನ್ನಡೆ. ಶುಭಸಂಖ್ಯೆ: 5
ಕುಂಭ: ಕುಟುಂಬ ಸೌಖ್ಯವಿದೆ. ಬಹುಕಾಲದಿಂದ ಬಾಕಿಯಿದ್ದ ಹಣ ಕೈ ಸೇರಿ ಮಾನಸಿಕ ಸಮಾಧಾನ. ಇಡೀ ದಿನ ಶಾಂತಿಯುತವಾಗಿರಲಿದೆ. ಶುಭಸಂಖ್ಯೆ: 1
ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ. ಷೇರು ವ್ಯವಹಾರ ಗಳಲ್ಲಿ ನಷ್ಟ . ದಾಂಪತ್ಯದಲ್ಲಿ ಕಲಹವಾದೀತು, ಸಹನೆ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 8