

ಉತ್ತರ ಪ್ರದೇಶ: ಬಸ್ಸಿನಲ್ಲಿ ನಿಗದಿದ ಮೊತ್ತ ನೀಡಿ, ಟಿಕೆಟ್ ಪಡೆದು ಸಂಚರಿಸುವುದು ನಿಯಮ. ಪ್ರತಿಯೊಬ್ಬ ಪ್ರಯಾಣಿಕನೂ ಟಿಕೆಟ್ ಖರೀದಿಸಿಯೇ ಪ್ರಯಾಣಿಸುತ್ತಾನೆ. ಇಲ್ಲವಾದ್ರೆ ಕಂಡೆಕ್ಟರ್ ಬಸ್ನಿಂದ ಇಳಿಯುವಂತೆ ಸೂಚಿಸುತ್ತಾನೆ. ಒಂದು ವೇಳೆ ಟಿಕೆಟ್ ರಹಿತ ಪ್ರಯಾಣ ಮಾಡಿದರೆ ದಂಡವನ್ನೂ ಕಟ್ಟಬೇಕಾಗುತ್ತದೆ.
ಆದರೆ ಇಲ್ಲೊಬ್ಬರು ಹಿರಿಯ ಪೊಲೀಸ್ ಅಧಿಕಾರಿ ತನ್ನ ಪ್ರಭಾವ ಬಳಸಿ, ಟಿಕೆಟ್ ಖರೀದಿಸದೆ ಪ್ರಯಾಣಿಸಿದ್ದಾರೆ. ದಾರಿ ಮಧ್ಯೆ ಸಹಪ್ರಯಾಣಿಕರು ಪೊಲೀಸ್ ಅಧಿಕಾರಿಯನ್ನು ಟಿಕೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಪ್ರಯಾಣಿಕರೊಬ್ಬರು ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಉನ್ನಾವೊ ಸಾರಿಗೆ ಇಲಾಖೆಯ ಬಸ್ಸಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಿತೇಂದ್ರ ಸಿಂಗ್ ಅವರನ್ನು ಪ್ರಯಾಣಿಕರು ಪ್ರಶ್ನಿಸಿ, ನಿಮ್ಮ ಟಿಕೆಟ್ ಎಲ್ಲಿ ಎಂದು ಕೇಳಿದ್ದಾರೆ. ಈ ವೇಳೆ ಇನ್ಸ್ಪೆಕ್ಟರ್ ನೀವು ದರೋಡೆಯಾಗುವುದನ್ನು ನಿಲ್ಲಿಸಿ ಮತ್ತು ನಿಮ್ಮ ವ್ಯವಹಾರವನ್ನು ನೋಡಿಕೊಳ್ಳಿ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ. ನಂತರ ನಾನು ಪ್ರಯಾಣಿಸುತ್ತಿರುವ ಜಾಗ ಇಲ್ಲೇ ಹತ್ತಿರದಲ್ಲಿದೆ. ಹೀಗಾಗಿ ಟಿಕೆಟ್ ಖರೀದಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ಸ್ಪೆಕ್ಟರ್ ಜಿತೇಂದ್ರ ಸಿಂಗ್ ವರ್ತನೆಯ ಬಗ್ಗೆ ಹಿರಿಯ ಅಧಿಕಾರಿಗಳು ವರದಿ ಕೇಳಿದ್ದು, ರಾಯ್ ಬರೇಲಿ ಹಾಗೂ ಉನ್ನಾವೋ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ವಿಡಿಯೋ ನೋಡಿದ ಅನೇಕರು ಇನ್ಸ್ಪೆಕ್ಟರ್ ಜಿತೇಂದ್ರ ಸಿಂಗ್ ವರ್ತನೆಯನ್ನು ಖಂಡಿಸಿದ್ದಾರೆ. ಕಷ್ಟದಲ್ಲಿರುವ ಸಾಮಾನ್ಯ ಜನರು ಕೂಡಾ ಟಿಕೆಟ್ ಪಪಡೆದು ಸಂಚರಿಸುತ್ತಾರೆ. ಆದರೆ ಸರ್ಕಾರಿ ನೌಕರಿಯಲ್ಲಿರುವ ನಿಮಗೆ ಟಿಕೆಟ್ ಖರೀದಿಸಲು ಉಡಾಫೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ಸಹಪ್ರಯಾಣಿಕರು ಧೈರ್ಯದಿಂದ ಪ್ರಶ್ನಿಸಿದ್ದು ಸ್ವಾಗತಾರ್ಹ ಎಂದು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)