ಈ ರಾಶಿಯವರಿಗಿಂದು ಸ್ತ್ರೀಯರಿಂದ ನೆರವು, ಮನಃಶಾಂತಿ: ನಿತ್ಯಭವಿಷ್ಯ

Nitya-Bhavishya-vvani-1-2-1-1
Published on

ಮೇಷ: ಗುರುಗಳ ದರ್ಶನ. ಮನಃಶಾಂತಿ. ಶತ್ರು ನಾಶ. ಸ್ನೇಹಿತರಿಂದ ಸಹಾಯ. ಉದ್ಯೋಗದಲ್ಲಿ ಬಡ್ತಿ. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 1

ವೃಷಭ: ಅತಿಯಾದ ನಿದ್ರೆ ಮಾಡಬೇಕೆನಿಸುವುದು. ಸಕಾಲ ಭೋಜನ. ವಿಪರೀತ ವ್ಯಸನ ಒಳ್ಳೆಯದಲ್ಲ. ವ್ಯಾಪಾರದಲ್ಲಿ ಅಲ್ಪ ಲಾಭ. ಶುಭಸಂಖ್ಯೆ: 9

ಮಿಥುನ: ಹೊಸ ಕೆಲಸ ಪ್ರಾರಂಭಿಸಲು ಒಳ್ಳೆಯ ದಿನವಲ್ಲ. ಕಾರ್ಯ ವಿಕಲ್ಪ. ಅನ್ಯ ಜನರಲ್ಲಿ ದ್ವೇಷ. ಇಷ್ಟ ದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 5

ಕಟಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಸಮಾಧಾನ. ಆಕಸ್ಮಿಕ ಖರ್ಚು. ರೋಗಬಾಧೆ. ವಿವಾಹ ಯೋಗ. ಮನಃಶಾಂತಿ ಸಿಗುವುದು. ಶುಭಸಂಖ್ಯೆ: 8

ಸಿಂಹ: ಬಂಧುಗಳ ಆಗಮನ. ಹಿತಶತ್ರುಗಳಿಂದ ದೂರವಿರುವುದು ಉತ್ತಮ. ಅಪಕೀರ್ತಿ ಬರಬಹುದು. ವಿದ್ಯಾರ್ಥಿಗಳಿಗೆ ಮುನ್ನಡೆ. ಶುಭಸಂಖ್ಯೆ: 8

ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ. ತೀರ್ಥಯಾತ್ರಾ ದರ್ಶನ. ಅಧಿಕ ತಿರುಗಾಟ. ಆರೋಗ್ಯದಲ್ಲಿ ವ್ಯತ್ಯಯ. ವಾಹನ ರಿಪೇರಿ ಅಗತ್ಯ. ಶುಭಸಂಖ್ಯೆ: 3

ತುಲಾ: ವಿರೋಧಿಗಳಿಂದ ತೊಂದರೆ. ಕೃಷಿಯಲ್ಲಿ ಅಲ್ಪ ಲಾಭ. ಮನಕ್ಲೇಷ. ವ್ಯಾಪಾರದಲ್ಲಿ ಧನಲಾಭ. ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ: 3

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಜಯ. ಕೋರ್ಟ್ ವ್ಯಾಜ್ಯಗಳಲ್ಲಿ ವಿಳಂಬ. ಶತ್ರು ನಾಶ. ಹಣದ ತೊಂದರೆ. ಮಿತ್ರರಿಂದ ನಂಬಿಕೆ ದ್ರೋಹ. ಶುಭಸಂಖ್ಯೆ: 2

ಧನುಸ್ಸು: ಮನಸ್ಸಿನಲ್ಲಿ ಗೊಂದಲ ಉಂಟಾಗುವುದು. ಅಲ್ಪ ಆದಾಯ ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 2

ಮಕರ: ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ. ಅನ್ಯ ಜನರಲ್ಲಿ ವೈಮನಸ್ಸು. ವಾಹನದಿಂದ ತೊಂದರೆ. ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 8

ಕುಂಭ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಮನಃಶಾಂತಿ. ಸ್ತ್ರೀಯರಿಂದ ನೆರವು. ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಮಕ್ಕಳಿಂದ ಸಂತಸ. ಶುಭಸಂಖ್ಯೆ: 7

ಮೀನ: ಸ್ನೇಹಿತರಿಂದ ಮಹಿಳೆಯರಿಗೆ ಆಭರಣ ಲಾಭ. ಚಂಚಲ ಮನಸ್ಸು. ನಾನಾ ರೀತಿಯ ಸಂಪಾದನೆಯ ಮಾರ್ಗ ಕಾಣಿಸುವುದು. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net