More

    ಆಪ್​ನಿಂದ ಬಿಜೆಪಿಗೆ ಮಾಜಿ ಪೊಲೀಸ್ ಕಮಿಷನರ್​; ನಾಳೆಯೇ ಪಕ್ಷಾಂತರ ಆಗಲಿರುವ ಭಾಸ್ಕರ್ ರಾವ್​

    ಬೆಂಗಳೂರು: ರಾಜಧಾನಿಯ ರಾಜಕಾರಣದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಿಂದಾಗಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆಮ್​ ಆದ್ಮಿ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷವನ್ನು ಸೇರಲಿರುವುದು ನಿಚ್ಚಳವಾಗಿದೆ.

    ಆಮ್​ ಆದ್ಮಿ ಪಕ್ಷದ ಕರ್ನಾಟಕ ಘಟಕದ ಉಪಾಧ್ಯಕ್ಷ ಹಾಗೂ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿರುವ ಭಾಸ್ಕರ್ ರಾವ್​ ನಾಳೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತು ಭಾಸ್ಕರ್ ರಾವ್ ಅವರಿಂದ ಯಾವುದೇ ಹೇಳಿಕೆ ಇದುವರೆಗೆ ಹೊರಬೀಳದಿದ್ದರೂ, ಅವರು ಬಿಜೆಪಿ ಸೇರಲಿರುವುದನ್ನು ಮೂಲಗಳು ಖಚಿತಪಡಿಸಿವೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು

    ಇದೇ ವಿಚಾರವಾಗಿ ಭಾಸ್ಕರ್ ರಾವ್ ಇಂದು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್​, ಮಾಜಿ ಐಪಿಎಸ್​ ಅಧಿಕಾರಿ ಕೆ.ಅಣ್ಣಾಮಲೈ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಸಚಿವ ಆರ್. ಅಶೋಕ್ ಅವರನ್ನು ಪದ್ಮನಾಭನಗರದಲ್ಲಿ ಭೇಟಿಯಾಗಿ ಅವರೊಂದಿಗೂ ಭಾಸ್ಕರ್ ರಾವ್ ಮಾತುಕತೆ ನಡೆಸಿದ್ದಾರೆ.

    ಇದನ್ನೂ ಓದಿ: ಮಗನ ಕಾಟ ತಾಳಲಾಗದೇ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ತಂದೆ!

    ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆ ಬಗ್ಗೆ ವರಿಷ್ಠರ ಗಮನಕ್ಕೂ ತರಲಾಗಿದ್ದು, ಅವರು ಕೂಡ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ. ಅದರಲ್ಲೂ ನಾಳೆಯೇ ಭಾಸ್ಕರ್ ರಾವ್ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

    Bhaskar Rao R Ashoka

    ಮುಳ್ಳುಹಂದಿಯ ಆಸೆಗೆ ಪ್ರಾಣವನ್ನೇ ಕಳೆದುಕೊಂಡ್ರು; ಗುಹೆಯೊಳಗೆ ಉಸಿರುಗಟ್ಟಿ ಇಬ್ಬರ ಸಾವು

    ಶಾಸಕರ ಭಾವಚಿತ್ರಕ್ಕೆ ಸೆಗಣಿ ಬಳಿದು ಚಪ್ಪಲಿ ಹೊಡೆತ; ಹೊಡೆದವರು ತಲೆ ಕೆಟ್ಟವರು, ದೂರು ನೀಡಲ್ಲ ಎಂದ ಮಹೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts