

ಮೇಷ: ಮಕ್ಕಳು ವಿದ್ಯಾಭ್ಯಾಸದತ್ತ ಗಮನಹರಿಸಿ. ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ಆಸ್ತಿ ವಿಚಾರದಲ್ಲಿ ಶುಭ ಸಮಾಚಾರ ಬರಲಿದೆ. ಶುಭಸಂಖ್ಯೆ: 9
ವೃಷಭ: ಸ್ಟೇಷನರಿ ವ್ಯಾಪಾರಸ್ಥರಿಗೆ ಲಾಭದಾಯಕ ದಿನವಾಗಿದೆ. ಕಂಪ್ಯೂಟರ್ ಮಾರಾಟಗಾರರಿಗೂ ಶುಭದಿನ. ವಿದ್ಯೆಯಲ್ಲಿ ಅಪಜಯ. ಶುಭಸಂಖ್ಯೆ: 5
ಮಿಥುನ: ಸ್ನೇಹಿತರೊಂದಿಗೆ ಕಲಹ ಉಂಟಾಗುವ ಸಾಧ್ಯತೆ. ಕೌಟುಂಬಿಕವಾಗಿ ಸಮಸ್ಯೆ ಉಂಟಾಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಭಸಂಖ್ಯೆ: 7
ಕಟಕ: ವಿದೇಶಿ ಕಂಪನಿಗಳ ಕೆಲಸಗಾರರಿಗೆ ಉತ್ತಮ ದಿನ. ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ. ದೇಹಾಯಾಸದತ್ತ ಗಮನಹರಿಸಿ. ಶುಭಸಂಖ್ಯೆ: 3
ಸಿಂಹ: ವಿದ್ಯಾರ್ಥಿಗಳಿಗೆ ವಿಶ್ರಾಂತಿಯ ಅಗತ್ಯವಿದೆ. ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತು ಕೇಳುವಿರಿ. ಭೂವ್ಯಾಜ್ಯದಲ್ಲಿ ಜಯವಿದೆ. ಶುಭಸಂಖ್ಯೆ: 8
ಕನ್ಯಾ: ಕುಟುಂಬದಲ್ಲಿ ಕಲಹ. ಉದರ ಬಾಧೆ ಕಾಡುವುದು. ಮದ್ಯ ಮಾರಾಟಗಾರರಿಗೆ ನಷ್ಟ. ವ್ಯಾಪಾರ- ವ್ಯವಹಾರಗಳಲ್ಲಿ ತೊಂದರೆ. ಶುಭಸಂಖ್ಯೆ: 9
ತುಲಾ: ಮನೆಯ ನವೀಕರಣದ ಕುರಿತು ಚಿಂತನೆ ನಡೆಸುವಿರಿ. ಸಂತಾನ ಅಪೇಕ್ಷಿಗಳಿಗೆ ಶುಭ ಸಮಾಚಾರ. ವಿವಾಹಕಾಂಕ್ಷಿಗಳಿಗೆ ಶುಭ. ಶುಭಸಂಖ್ಯೆ: 1
ವೃಶ್ಚಿಕ: ಖರ್ಚಿನಲ್ಲಿ ಹಿಡಿತವಿರಲಿ. ಅಧಿಕಾರಿಗಳಿಂದ ಪೋ›ತ್ಸಾಹ. ಕುಟುಂಬದಲ್ಲಿ ಸಂತಸದ ಕ್ಷಣ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಶುಭಸಂಖ್ಯೆ: 6
ಧನುಸ್ಸು: ನಿದ್ರಾಹೀನತೆಯಿಂದ ಬಳಲಿಕೆ ಸಾಧ್ಯತೆ. ಆದಾಯದಲ್ಲಿ ಹೆಚ್ಚಳ ಕಂಡುಬಂದು ಮಾನಸಿಕ ಸಮಾಧಾನ. ಮಾನಸಿಕ ಒತ್ತಡ ಕಡಿಮೆ. ಶುಭಸಂಖ್ಯೆ: 8
ಮಕರ: ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಗೊಂದಲ. ವಿದ್ಯಾರ್ಥಿಗಳಿಗೆ ಯಶಸ್ಸು. ಅನಾರೋಗ್ಯದಿಂದ ಬಾಧೆ ಅನುಭವಿಸುವಿರಿ. ಶುಭಸಂಖ್ಯೆ: 2
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳ ಭೇಟಿ ಕೊಡುವಿರಿ. ಸ್ವಯಂ ಉದ್ಯೋಗಸ್ಥರಿಗೆ ಶುಭದಾಯಕ. ಶುಭಸಂಖ್ಯೆ: 7
ಮೀನ: ತಂದೆ-ಮಕ್ಕಳಲ್ಲಿ ಸಾಮರಸ್ಯ. ಉಳಿತಾಯದ ಮಹತ್ವ ತಿಳಿಯಲಿದೆ. ಉನ್ನತ ಸ್ಥಾನಮಾನ . ರಾಜಕಾರಣಿಗಳಿಗೆ ಅವಮಾನ. ಶುಭಸಂಖ್ಯೆ: 4