

ಉತ್ತರಕನ್ನಡ: ರಾಜ್ಯದಲ್ಲಿ ಈಗಾಗಲೇ ಕೆಲವು ಕೋ-ಆಪರೇಟಿವ್ ಬ್ಯಾಂಕ್ಗಳ ಅವ್ಯವಹಾರ ಬೆಳಕಿಗೆ ಬಂದಿದ್ದು, ಮತ್ತಷ್ಟು ಬ್ಯಾಂಕ್ಗಳ ವಹಿವಾಟು ಕುರಿತಂತೆ ಊಹಾಪೋಹಗಳು ಕೇಳಿ ಬರುತ್ತಿವೆ. ಈ ಮಧ್ಯೆ ಇನ್ನೊಂದು ಸಹಕಾರಿ ಸಂಘದಲ್ಲಿ ಅವ್ಯವಹಾರ ಆಗಿರಬಹುದು ಎನ್ನುವಂಥ ಅನುಮಾನ ಮೂಡಿಸುವ ಬೆಳವಣಿಗೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತಕ್ಕೆ ಸಂಬಂಧಿಸಿದಂತೆ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಈ ಸಂಘದ ಅಧ್ಯಕ್ಷರು ಹಾಗೂ ಸದಸ್ಯರೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಸಹಕಾರಿ ಸಂಘದ ನೂತನ ಸಮಿತಿ ಸಭೆ ಕರೆದಿದ್ದು, ಅಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕಿ ಸಭೆಯ ನಡಾವಳಿ ಪುಸ್ತಕ ನೀಡದ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆ ನಡೆದಿದೆ. ನಡಾವಳಿ ಪುಸ್ತಕ ನೀಡದ ಆಕೆ, ಸಂಘದ ಕಟ್ಟಡದ ಬೀಗ ಹಾಕಿ ಹೊರ ನಡೆದಿದ್ದಾರೆ. ಸಂಘದ ಅವ್ಯವಹಾರ ಬಯಲಾಗುವ ಭೀತಿಯಿಂದ ಆಕೆ ನಡಾವಳಿ ಪುಸ್ತಕ ನೀಡದೆ ಹೋಗಿದ್ದಾರೆ ಎಂದು ನೂತನ ಅಧ್ಯಕ್ಷೆ ನಯನಾ ನಾಯ್ಕ ಆರೋಪಿಸಿದ್ದಾರೆ.