ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ 10 ನಿಮಿಷ ಧ್ಯಾನ ಮಾಡ್ಬೇಕು: ಸಚಿವ ನಾಗೇಶ್​

Meditation vvani
Published on

ಬೆಂಗಳೂರು: ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ 10 ನಿಮಿಷ ಧ್ಯಾನ ಮಾಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುತ್ತೋಲೆ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಳ, ಆರೋಗ್ಯ ವೃದ್ಧಿ, ಸದ್ವಿಚಾರ ಚಿಂತನೆಗೂ ಸಹಕಾರಿಯಾಗಲಿದೆ ಧ್ಯಾನ. ಮಾನಸಿಗ ಆರೋಗ್ಯದ ಗುಟ್ಟು ಧ್ಯಾನದಲ್ಲಿ. ಇದರ ಮಹತ್ವ ಅರಿತ ಶಿಕ್ಷಣ ಸಚಿವರು ಒತ್ತಡದಿಂದ ಮುಕ್ತವಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಧ್ಯಾನಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ.

ಇನ್ಮುಂದೆ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಪ್ರತಿನಿತ್ಯ 10 ನಿಮಿಷ ಧ್ಯಾನಕ್ಕಾಗಿ ಮೀಸಲಿಡಬೇಕು. ತಪ್ಪದೇ ಎಲ್ಲರೂ ಧ್ಯಾನ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net