

ವಿಜಯನಗರ: ಒಂದೇ ಕುಟುಂಬದ ನಾಲ್ಕು ಮಕ್ಕಳು ನೀರಲ್ಲಿ ಮುಳಗಿ ಮೃತಪಟ್ಟ ದುರ್ಘಟನೆ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ಬುಧವಾರ ಸಂಭವಿಸಿದೆ.
ಅಭಿ ನಾಯ್ಕ(13), ಅಶ್ವಿನಿ(14), ಕಾವೇರಿ (17) ಮತ್ತು ಅಪೂರ್ವಾ (17) ಮೃತ ದುರ್ದೈವಿಗಳು. ಇತ್ತೀಚಿಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ, ಹೊಂಡಗಳು ತುಂಬಿವೆ. ಆಟವಾಡುತ್ತಿದ್ದ ಅಭಿ ಹೊಂಡದಲ್ಲಿ ಮುಳುಗಿದ್ದನ್ನು. ಇದನ್ನು ನೋಡಿದ ಮೂವರು ಅಕ್ಕಂದಿರೂ ತಮ್ಮನನ್ನು ರಕ್ಷಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಹೋದರ ಮತ್ತು ಸಹೋದರಿಯರ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮ ಕಂಬನಿ ಮಿಡಿದಿದೆ. ನೀರಿಂದ ಮೃತದೇಹಗಳನ್ನು ಹೊರತೆಗೆದು ಸಾಲಾಗಿ ಮಲಗಿಸಿದ್ದನ್ನ ನೋಡಿ ನೆರೆದಿದ್ದವರು ವಿಧಿಯನ್ನ ಶಪಿಸುತ್ತಾ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಹರಪನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.