ಆನ್​ಲೈನ್​​ನಲ್ಲಿ ಬಟ್ಟೆ ಬದಲಿಗೆ ಬಂದಿದ್ದೇ ಬೇರೆ! ಜೀವನದಲ್ಲಿ ಇದನ್ನು ಮರೆಯಲ್ಲ ಎಂದಳು ಮಹಿಳೆ

WhatsApp Image 2024-03-18 at 10.36.43 AM
Published on

ಅಮೆರಿಕಾ: ಈ ರೀತಿಯ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ತಾವು ಆನ್​ಲೈನ್​ನಲ್ಲಿ ಆರ್ಡರ್ ಮಾಡುವ ವಸ್ತುವೇ ಒಂದು ಅದು ಕೈಗೆ ಬಂದ ಮೇಲೆ ಪ್ಯಾಕೇಜ್​ನಲ್ಲಿ ಇರುವುದೇ ಮತ್ತೊಂದು. ಇಂತಹ ಹಲವಾರು ನಿದರ್ಶನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೋಸ ಹೋದ ಗ್ರಾಹಕರು ಪೋಸ್ಟ್​ ಮಾಡಿರುವುದನ್ನು ನಾವೆಲ್ಲಾ ನೋಡಿಯೇ ಇದ್ದೇವೆ. ಇಲ್ಲಿ ಕೂಡ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬಟ್ಟೆಯ ಬದಲಿಗೆ ರಕ್ತ ಡೆಲಿವರಿಯಾಗಿದೆ.

​ಆನ್​ಲೈನ್​ನಲ್ಲಿ ಬಟ್ಟೆ ಆರ್ಡರ್​ ಮಾಡಿದ್ದ ಮಹಿಳೆಗೆ ಅಚ್ಚರಿ ಎದುರಾಗಿದ್ದು, ಆ ವಸ್ತು ಡೆಲಿವರಿ ಆದ ಬಳಿಕವೇ! ಪಾರ್ಸೆಲ್‌ನಲ್ಲಿ ತನ್ನಿಷ್ಟದ ಡ್ರೆಸ್​ ಬದಲಿಗೆ ರಕ್ತ ಸ್ವೀಕರಿಸಿದ್ದನ್ನು ನೋಡಿ ಮಹಿಳೆ ಕಂಗಾಲಾಗಿದ್ದಾರೆ. ಟೊಮೆಟೊ ಕೆಚಪ್ ಅಥವಾ ಸೋಯಾ ಸಾಸ್ ಆರ್ಡರ್ ಮಾಡಿದಿದ್ದರೇ ಇದು ಬಂದಿರುವುದರಲ್ಲಿ ತಪ್ಪಿಲ್ಲ ಎನ್ನಬಹುದಿತ್ತೇನೋ. ಆದ್ರೆ, ಸ್ಪಷ್ಟವಾಗಿ ಬಟ್ಟೆ ಎಂದು ಆಯ್ಕೆ ಮಾಡಿದ್ದರೂ ಸಹ ಈ ರೀತಿ ಆಗಿರುವುದು ಮಹಿಳೆಗೆ ನಂಬಲು ಸಾಧ್ಯವಾಗಿಲ್ಲ.

ಆನ್‌ಲೈನ್ ಅಪ್ಲಿಕೇಶನ್‌ನ ಮೂಲಕ ತನಗಾಗಿ ಕೆಲವು ಡ್ರೆಸ್‌ಗಳನ್ನು ಆರ್ಡರ್ ಮಾಡಿದ ಅಮೆರಿಕಾದ ಮಹಿಳೆ ಅನ್ನಾ ಎಲಿಯಟ್, ತನ್ನ ಪಾರ್ಸೆಲ್ ತೆರೆದಾಗ ಅದರಲ್ಲಿ ರಕ್ತದ ಸೀಸೆ ಮತ್ತು ಗುಲಾಬಿ ಬೀನ್ಸ್ ಕ್ಯಾನ್ ಇರುವುದು ಪತ್ತೆಯಾಗಿದೆ. ಅದನ್ನು ವಿಡಿಯೋ ಮಾಡಿಕೊಂಡ ಮಹಿಳೆ ದೂರನ್ನು ನೀಡಿ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net