

ನವದೆಹಲಿ: ಕರೊನಾವೈರಸ್ ಸೋಂಕಿನಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯೋರ್ವ ಶನಿವಾರ ಸಾವನ್ನಪ್ಪಿದ್ದಾರೆ.
ಈ ಮೂಲಕ ದೇಶದ ಅತಿದೊಡ್ಡ ಅರೆಸೈನಿಕ ಪಡೆಯಲ್ಲಿ ಒಟ್ಟು ಸಾವುಗಳ ಸಂಖ್ಯೆ ಎಂಟಕ್ಕೇರಿದೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಆರ್‌ಪಿಎಫ್ ಕೇಂದ್ರ ಕಚೇರಿಯ ಆಡಳಿತ ವಿಭಾಗದಲ್ಲಿ 43 ವರ್ಷದ, ಬಿಹಾರ ಮೂಲದ ಕಾನ್‌ಸ್ಟೆಬಲ್ ನನ್ನು ಚಾಲಕನನ್ನಾಗಿ ನೇಮಿಸಲಾಗಿತ್ತು. ಅವರಿಗೆ ದೀರ್ಘಕಾಲದ ಮೂತ್ರಪಿಂಡ ಸಮಸ್ಯೆ ಮತ್ತು ಅಧಿಕ ಒತ್ತಡ ಸಮಸ್ಯೆಯೂ ಇತ್ತು. ಶುಕ್ರವಾರ ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೋವಿಡ್ -19 ಸೋಂಕು ದೃಢಪಟ್ಟಿತು. ಅವರು ಇಂದು ನಗರದ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸಿಆರ್‌ಪಿಎಫ್ ತಿಳಿಸಿದೆ.
ಇತ್ತೀಚಿನ ಸಾವು ಪ್ರಕರಣದೊಂದಿಗೆ, ಐದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ ಸಿಆರ್‌ಪಿಎಫ್, ಬಿಎಸ್ಎಫ್, ಸಿಐಎಸ್ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಗಳಲ್ಲಿ ಸಾವಿನ ಸಂಖ್ಯೆ ಈಗ 24 ಕ್ಕೆ ಏರಿದೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈವರೆಗೆ 245 ಸಕ್ರಿಯ ಪ್ರಕರಣಗಳನ್ನು ಒಳಗೊಂಡಂತೆ 868 ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ.
ಇಲ್ಲಿಯವರೆಗೆ, ಬಿಎಸ್ಎಫ್ನ 618 ಕರೋನವೈರಸ್ ರೋಗಿಗಳು ಚಿಕಿತ್ಸೆಯ ನಂತರ ರೋಗದಿಂದ ಚೇತರಿಸಿಕೊಂಡಿದ್ದರೆ, ಐವರು ಸಾವನ್ನಪ್ಪಿದ ವರದಿಯಾಗಿದೆ.
3.25 ಲಕ್ಷ ಸಿಬ್ಬಂದಿ ಬಲದ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಪ್ರಸ್ತುತ 1,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳಿವೆ, ಈ ಐದು ಸಿಎಪಿಎಫ್‌ಗಳು ಮತ್ತು ಇತರ ಎರಡು ಕೇಂದ್ರ ಪಡೆಗಳಾದ ಎನ್‌ಎಸ್‌ಜಿ ಮತ್ತು ಎನ್‌ಡಿಆರ್‌ಎಫ್‌ನಲ್ಲಿ ಈವರೆಗೆ 3,300 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಬಿಎಸ್‌ಎಫ್‌ನಲ್ಲಿ 868 ಕ್ಕೂ ಹೆಚ್ಚು, ಸಿಐಎಸ್‌ಎಫ್‌ನಲ್ಲಿ 733, ಐಟಿಬಿಪಿಯಲ್ಲಿ 306, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯಲ್ಲಿ (ಎನ್‌ಡಿಆರ್‌ಎಫ್) 184, ಎಸ್‌ಎಸ್‌ಬಿಯಲ್ಲಿ 139 ಮತ್ತು ಎನ್ಎಸ್ಜಿಯಲ್ಲಿ 70 ಕರೊನಾವೈರಸ್ ಪ್ರಕರಣಗಳಿವೆ.
ಇದನ್ನೂ ಓದಿ: ಚೆನ್ನೈಗೆ ಬಂದರು ಬ್ಯಾಟ್ಮ್ಯಾನ್, ಸ್ಪೈಡರ್ಮ್ಯಾನ್!
ಅವರಲ್ಲಿ ಸುಮಾರು 2 ಸಾವಿರ ಭದ್ರತಾ ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ ಮತ್ತು ಸುಮಾರು 1,280 ಮಂದಿ ಮಾತ್ರ ದೇಶಾದ್ಯಂತ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಐಎಸ್ಎಫ್ ನಲ್ಲಿ ಏಳು, ಬಿಎಸ್‌ಎಫ್‌ನಲ್ಲಿ ಐದು ಮತ್ತು ಐಟಿಬಿಪಿ ಮತ್ತು ಎಸ್‌ಎಸ್‌ಬಿಯಲ್ಲಿ ತಲಾ ಎರಡು ಸಾವು ಪ್ರಕರಣಗಳು ವರದಿಯಾಗಿವೆ.