ಕರ್ತಾಪುರ್ ಕಾರಿಡಾರ್ ಮರು ಆರಂಭಕ್ಕೆ ಸಿದ್ಧತೆ: ಪಾಕಿಸ್ತಾನದ್ದು ತೋರಿಕೆ ಸದ್ಭಾವನೆ ಎಂದ ಕೇಂದ್ರ

kartapur jpg
Published on

ನವದೆಹಲಿ:ಮಹಾರಾಜ ರಣಜೀತ್ ಸಿಂಗ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಜೂನ್ 29 ರಂದು ಕರ್ತಾರ್‌ಪುರ ಕಾರಿಡಾರ್ ತೆರೆಯಲು ಪಾಕಿಸ್ತಾನ ಸಿದ್ಧತೆಯನ್ನು ತಿಳಿಸಿದ ಕೆಲವೇ ಗಂಟೆಗಳ ನಂತರ ನವದೆಹಲಿಯ ಅಧಿಕೃತ ಮೂಲಗಳು ಇದನ್ನು "ತೋರಿಕೆಯ ಸದ್ಭಾವನೆಯನ್ನು ಸೃಷ್ಟಿಸುತ್ತಿರುವ ಪ್ರಯತ್ನ''ವೆಂದು ಕರೆದಿವೆ.

“ಜಗತ್ತಿನಾದ್ಯಂತ  ಧಾರ್ಮಿಕ  ಸ್ಥಳಗಳು ತೆರೆಯುತ್ತಿದ್ದಂತೆ, ಪಾಕಿಸ್ತಾನವು ಎಲ್ಲ ಸಿಖ್ ಯಾತ್ರಿಕರಿಗಾಗಿ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಿದೆ, ಕಾರಿಡಾರ್ ಅನ್ನು ಜೂನ್ 29 ರಂದು ಮಹಾರಾಜಾ ರಣಜೀತ್ ಸಿಂಗ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಮತ್ತೆ ತೆರೆಯಲು ಸಿದ್ಧತೆಯ ಕುರಿತು ಭಾರತೀಯರಿಗೆ ತಿಳಿಸಲಾಗುತ್ತಿದೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಶನಿವಾರ ಟ್ವಿಟ್ಟರ್ ನಲ್ಲಿ ಘೋಷಿಸಿದರು.

ಕರೋನವೈರಸ್ ಹರಡುವುದನ್ನು ನಿಯಂತ್ರಿಸುವ ಮತ್ತು ತಡೆಗಟ್ಟುವ ಕ್ರಮಗಳ ಭಾಗವಾಗಿ ಗಡಿಯಾಚೆಗಿನ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಮತ್ತು ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 7 ದಿನಗಳ ಮೊದಲು ಮಾಹಿತಿಯನ್ನು ಹಂಚಿಕೊಳ್ಳಬೇಕು. ಆದರೆ ಕಾರಿಡಾರ್ ತೆರೆಯುವ ನಿರ್ಧಾರದ ಕುರಿತು ಪಾಕಿಸ್ತಾನ ಕೇವಲ 2 ದಿನ ಮುಂಚೆ ಮಾತ್ರ ಮಾಹಿತಿ ನೀಡಿದೆ ಎಂದು ಅದರ ಟೀಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಕರೊನಾ ಹಿನ್ನೆಲೆಯಲ್ಲಿ ಮಾರ್ಚ್ 16 ರಂದು ಕಾರಿಡಾರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

ರಾವಿ ನದಿ ಪ್ರವಾಹ ಬಯಲು ಪ್ರದೇಶಗಳಲ್ಲಿ ಪಾಕಿಸ್ತಾನವು ದ್ವಿಪಕ್ಷೀಯ ಒಪ್ಪಂದದಲ್ಲಿ ಬದ್ಧತೆ ಹೊಂದಿದ್ದರೂ ಸಹ ನದಿಯ ಪ್ರವಾಹ ಬಯಲು ಪ್ರದೇಶದ ಬದಿಯಲ್ಲಿ ಸೇತುವೆಯನ್ನು ನಿರ್ಮಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾನ್ಸೂನ್ ಇರುವುದರಿಂದ ಕಾರಿಡಾರ್ ಮೂಲಕ ಸುರಕ್ಷಿತ ರೀತಿಯಲ್ಲಿ ಯಾತ್ರಾರ್ಥಿಗಳ ಸಂಚಾರ ಸಾಧ್ಯವಿದೆಯೇ ಎಂದು ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ.

4.2 ಕಿ.ಮೀ.ಉದ್ದದ ಕಾರಿಡಾರ್ ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಪಟ್ಟಣವನ್ನು ಪಾಕಿಸ್ತಾನದ ನರೋವಾಲ್ ಜಿಲ್ಲೆಯ ಶಾಕರ್​​ಗರ್​​​ತಾಲ್ಲೂಕಿನ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರದೊಂದಿಗೆ ಸಂಪರ್ಕಿಸುತ್ತದೆ.

ಭಾರತೀಯ ಯಾತ್ರಾರ್ಥಿಗಳಿಗೆ ಪವಿತ್ರ ಗುರುದ್ವಾರಕ್ಕೆ ವೀಸಾ ರಹಿತ ಭೇಟಿಗೆ ಅವಕಾಶ ನೀಡುವ ಸಲುವಾಗಿ ಕರ್ತಾರ್‌ಪುರ ಕಾರಿಡಾರ್‌ನ್ನು ಪ್ರಾರಂಭಿಸಲು ಭಾರತ ಮತ್ತು ಪಾಕಿಸ್ತಾನ 2019 ರ ಅಕ್ಟೋಬರ್‌ನಲ್ಲಿ ಸಹಿ ಹಾಕಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net