More

    ‘ಚೀನಾದ ಹೇಡಿತನದ ಆಕ್ರಮಣವನ್ನು ಸಾರ್ವಜನಿಕವಾಗಿ ಟೀಕಿಸಿ…’: ಪ್ರಧಾನಿಗೆ ಒತ್ತಾಯ

    ನವದೆಹಲಿ: ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆ ಬಳಿ ಭಾರತೀಯ ಯೋಧರ ಮೇಲೆ ಆಕ್ರಮಣ ಮಾಡಿದ ಚೀನಾ ವಿರುದ್ಧ ಕಾಂಗ್ರೆಸ್​ ನಾಯಕರು ಸಿಕ್ಕಾಪಟೆ ವಾಗ್ದಾಳಿ ನಡೆಸುತ್ತಿದ್ದಾರೆ.

    ಇದೀಗ ಕಾಂಗ್ರೆಸ್ ಮುಖಂಡ ಕಪಿಲ್​ ಸಿಬಲ್​ ಚೀನಾದ ದಾಳಿಯನ್ನು ಖಂಡಿಸಿದ್ದು, ಲಜ್ಜೆಗೆಟ್ಟು ಆಕ್ರಮಣ ಮಾಡಿದ ಚೀನಾವನ್ನು ಸಾರ್ವಜನಿಕವಾಗಿ ಟೀಕಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಆದಷ್ಟು ಶೀಘ್ರದಲ್ಲಿ, ಕಠಿಣ ಕ್ರಮವನ್ನು ಕೈಗೊಳ್ಳಿ ಎಂದು ಹೇಳಿದ್ದಾರೆ.

    ವರ್ಚ್ಯುವಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಪಿಲ್​ ಸಿಬಲ್​, ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಬೇಕು. ಯಾರಾದರೂ ಭಾರತದ ಭೂಪ್ರದೇಶವನ್ನು ಕಬಳಿಸಲು ಬಂದರೆ, ಅವರನ್ನು ಮುಲಾಜಿಲ್ಲದೆ ಹಿಮ್ಮೆಟ್ಟಿಸುತ್ತೇವೆ ಎಂದು ಮಾತು ಕೊಡಬೇಕು. ಇದನ್ನೂ ಓದಿ: ಚೀನಾ ವಿರುದ್ಧ ಸಮರ ಸಾರಿದ ‘ಕ್ವೀನ್​’: ಗಾಂಧೀಜಿಯವರ ಮಾತು ಮರೆತುಬಿಟ್ಟಿರಾ ಎಂದಿದ್ದೇಕೆ ಕಂಗನಾ?

    ಈ ವಿಚಾರದಲ್ಲಿ ಇಡೀ ದೇಶ ಹಾಗೂ ಎಲ್ಲ ಪ್ರತಿಪಕ್ಷಗಳೂ ನರೇಂದ್ರ ಮೋದಿಯವರ ಬೆಂಬಲಕ್ಕೆ ನಿಲ್ಲಲಿವೆ ಎಂದಿದ್ದಾರೆ.
    ಕಳೆದ ಆರು ವರ್ಷಗಳ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಅತಿದೊಡ್ಡಮಟ್ಟದಲ್ಲಿ ರಾಜತಾಂತ್ರಿಕ ವೈಫಲ್ಯತೆ ಕಾಣುತ್ತಿದೆ. ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಅತಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದರೂ ಭಯ ಬೇಡ: ಆರೋಗ್ಯ ಸಚಿವರಿಂದ ಒಂದು ಗುಡ್​ನ್ಯೂಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts