ಚೆನ್ನೈಗೆ ಬಂದರು ಬ್ಯಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್!

spiderman JPG
Published on

ಚೆನ್ನೈ: ತಮಿಳುನಾಡಿನ ರಾಜಧಾನಿಯಲ್ಲಿ ಕರೊನಾ ಹಾವಳಿ ವಿಪರೀತವಾಗಿದೆ. ಆದರೂ ಜನರು ಸರ್ಕಾರ ಸೂಚಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಜನರಿಗೆ ಮಾಸ್ಕ್ ಧರಿಸುವಂತೆ ಮನವೊಲಿಸಲು ಸರ್ಕಾರ ಸ್ಪೈಡರ್ ಮ್ಯಾನ್ ಮತ್ತು ಬ್ಯಾಟ್ ಮ್ಯಾನ್‌ಗಳ ಮೊರೆ ಹೋಗಿದೆ!

ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರದ ವತಿಯಿಂದ ಸ್ಪೈಡರ್‌ಮ್ಯಾನ್ ಮತ್ತು ಬ್ಯಾಟ್‌ಮ್ಯಾನ್ ಶನಿವಾರ ಚೆನ್ನೈನ ತಿರು ವಿಕಾ ನಗರದಲ್ಲಿ ಕಾಣಿಸಿಕೊಂಡರು. ‘ವೇರ್ ಎ ಮಾಸ್ಕ್, ಬಿ ಎ ಸೂಪರ್ ಹೀರೋ’ ಎಂಬ ಧ್ಯೇಯವಾಕ್ಯದೊಂದಿಗೆ ತಮಿಳುನಾಡು ಸರ್ಕಾರ ಈ ಅಭಿಯಾನ ನಡೆಸುತ್ತಿದೆ.

ಮಾಸ್ಕ್ ಧರಿಸುವುದು ಎಷ್ಟು ಮುಖ್ಯ, ಅದರಿಂದ ನಿಮ್ಮ ಜೀವ ಮಾತ್ರವಲ್ಲ, ನಿಮ್ಮ ಸಮೀಪದವರ ಜೀವಗಳನ್ನೂ ಉಳಿಸಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಸ್ಪೈಡರ್‌ಮ್ಯಾನ್ ಮತ್ತು ಬ್ಯಾಟ್‌ಮ್ಯಾನ್ ವೇಷ ಧರಿಸಿದ್ದ ಇಬ್ಬರು ಯುವಕರು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net