More

    ರೋಗದ ವಿರುದ್ಧ ಹೋರಾಟದಲ್ಲಿ ಭಾರತ ಮುಂದಿದೆ: ಪಿಎಂ

    ನವದೆಹಲಿ: ಕೋವಿಡ್ -19 ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಇತರ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
    ಡಾ.ಜೋಸೆಫ್ ಮಾರ್ ಥೋಮಾ ಮೆಟ್ರೋಪಾಲಿಟನ್ ಅವರ 90 ನೇ ಜನ್ಮದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
    “ ಈ ರೋಗದ ವಿರುದ್ಧ ಜಗತ್ತು ಪ್ರಬಲ ಹೋರಾಟ ನಡೆಸುತ್ತಿದೆ. ಜನರ ಜೀವನಕ್ಕೆ ಅಪಾಯ ತಂದೊಡ್ಡುವ COVID-19 ದೈಹಿಕ ಕಾಯಿಲೆ ಮಾತ್ರವಲ್ಲ. ಇದು ಅನಾರೋಗ್ಯಕರ ಜೀವನಶೈಲಿಯತ್ತಲೂ ನಾವು ಗಮನಹರಿಸುವಂತೆ ಮಾಡುತ್ತದೆ ಎಂದು ಅವರು ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದರು. 

    ಇದನ್ನೂ ಓದಿ: ಕರೊನಾ ಕಟ್ಟಿಹಾಕಲು ನಡೆಯಲಿದೆ ಸೆರಾಲಾಜಿಕಲ್ ಸಮೀಕ್ಷೆ
    ಈ ವರ್ಷದ ಆರಂಭದಲ್ಲಿ, ಭಾರತದಲ್ಲಿ ವೈರಸ್ ಪರಿಣಾಮವು ತೀವ್ರವಾಗಿರುತ್ತದೆ ಎಂದು ಕೆಲವರು ಊಹಿಸಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಮತ್ತು ಸರ್ಕಾರ ಕೈಗೊಂಡ ಹಲವಾರು ಉಪಕ್ರಮಗಳು ಮತ್ತು ರೋಗದ ವಿರುದ್ಧದ ಹೋರಾಟದಲ್ಲಿ ಜನರ ಸಹಭಾಗಿತ್ವ, ಕರೊನಾ ಸೇನಾನಿಗಳ ಪ್ರಬಲ, ತ್ಯಾಗಮಯ ಕಾರ್ಯದಿಂದಾಗಿ, ಭಾರತವು ಇತರ ರಾಷ್ಟ್ರಗಳಿಗಿಂತ ಹೆಚ್ಚು ಉತ್ತಮ ಸ್ಥಾನದಲ್ಲಿದೆ. ಚೇತರಿಕೆ ಪ್ರಮಾಣ ಏರುತ್ತಿದೆ ಎಂದರು.  

    ಇದನ್ನೂ ಓದಿ:  ಚೀನಾದ 1.45 ಕೋಟಿ ರೂ. ದೇಣಿಗೆ ಅಂಗವಿಕಲರ ಕಲ್ಯಾಣಕ್ಕೆ ಬಳಕೆ!

    ಜನರು ನಡೆಸುವ ಹೋರಾಟವು ಉತ್ತಮ ಫಲಿತಾಂಶಗಳನ್ನು ನೀಡಿದೆ. ಆದರೆ ಪ್ರತಿಯೊಬ್ಬರೂ ಇನ್ನೂ ಜಾಗರೂಕರಾಗಿರಬೇಕು ಮತ್ತು ಸಾಮಾಜಿಕ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವಿಕೆಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದುದು ಅಗತ್ಯವಾಗಿದೆ ಅವರು ಹೇಳಿದರು.
    ಮಾಸ್ಕ್ ಧರಿಸುವುದು, ಸಾಮಾಜಿಕ ದೂರವಿರುವುದು, , ಕಿಕ್ಕಿರಿದ ಜನಸಂದಣಿಯನ್ನು ತಪ್ಪಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು. 

    ಇದನ್ನೂ ಓದಿ:  ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಚಾಲನೆ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ. ಭಾರತದಲ್ಲಿ ಒಟ್ಟು ಕರೋನವೈರಸ್ ಸೋಂಕುಗಳ ಸಂಖ್ಯೆ 5,08,953 ಕ್ಕೆ ಏರಿದೆ, ಆದರೆ ಶನಿವಾರ ಬೆಳಗ್ಗೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 8,552 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 384 ಸಾವಿನ ಪ್ರಕರಣಗಳ ವರದಿ ಮಾಡಿದ ನಂತರ ಸಾವಿನ ಸಂಖ್ಯೆ 15,685 ಕ್ಕೆ ಏರಿದೆ. ‘

    ನಿಮ್ಮ ಮಕ್ಕಳ ಆನ್​ಲೈನ್​ ತರಗತಿ ಮೇಲೆ ಕಣ್ಣಿರಲಿ, ದಿಢೀರನೆ ಕಾಣಿಸುತ್ತವೆ ಅಶ್ಲೀಲ ದೃಶ್ಯಗಳು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts