More

    ಕೋವಿಡ್​ ಸೋಂಕಿತರ ಶವ ಸಾಗಿಸಲು ಅರ್ಥ್​ ಮೂವರ್ ಬಳಸಿದ್ರು!

    ಶ್ರೀಕಾಕುಲಂ: ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಕರೊನಾ ವೈರಸ್​ ಗುಣಲಕ್ಷಣ ಹೊಂದಿದ 70 ವರ್ಷದ ವ್ಯಕ್ತಿ ಮೃತಪಟ್ಟಾಗ ಆತನ ಮೃತದೇಹ ಸಾಗಿಸಲು ಅರ್ಥ್ ಮೂವರ್ ಒಂದನ್ನು ಬಳಸಲಾಗಿತ್ತು. ಈ ದೃಶ್ಯವಿರುವ ವಿಡಿಯೋ ವೈರಲ್ ಆಗಿದೆ.

    ಸೋಂಕಿತ ವ್ಯಕ್ತಿ ಗುರುವಾರ ರಾತ್ರಿ ನಿಧನರಾಗಿದ್ದು, ವಿಷಯ ತಿಳಿದ ಕೂಡಲೆ ಸ್ಥಳೀಯಾಡಳಿತದ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದ್ದರು. ಮೃತದೇಹವನ್ನು ಕೂಡಲೆ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಕೊಂಡೊಯ್ಯಲು ಅರ್ಥ್ ಮೂವರ್​ ಅನ್ನು ಬಳಸಿದ್ದರು. ಅಲ್ಲದೆ, ಸ್ಥಳವನ್ನು ಸ್ಯಾನಿಟೈಸ್ ಕೂಡ ಮಾಡಿದ್ದರು. ಈ ಸಂದರ್ಭದಲ್ಲಿ ಕೆಲವರು ಸ್ಥಳೀಯಾಡಳಿತ ಸಿಬ್ಬಂದಿಯ ಕೆಲಸವನ್ನು ವಿಡಿಯೋ ಮಾಡಿದ್ದರು. ವಿಡಿಯೋದಲ್ಲಿನ ದೃಶ್ಯಗಳ ಪ್ರಕಾರ, ಅರ್ಥ್​ ಮೂವರ್​ನ ಚಾಲಕ ಪಿಪಿಇ ಕಿಟ್ ಧರಿಸಿರಲಿಲ್ಲ. ಆದರೆ, ಜತೆಗಿದ್ದ ನಾಲ್ವರು ಪಿಪಿಇ ಕಿಟ್​ ಧರಿಸಿದ್ದರು. ಅರ್ಥ್​ ಮೂವರ್​ನ ಮುಂಭಾಗದ ಕೈಯಲ್ಲಿ ಡೆಡ್​ ಬಾಡಿಯನ್ನು ಹೊತ್ತೊಯ್ಯಲಾಗಿತ್ತು.

    ಇದನ್ನೂ ಓದಿ: ಲಡಾಖ್​ನಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದಕ್ಕೆ ಚೀನಾ ಭಾರಿ ಬೆಲೆ ತೆರಬೇಕಾಗುತ್ತೆ

    ಅಮಾನವೀಯ ಕೃತ್ಯ ಎಂದು ಆಂಧ್ರಪ್ರದೇಶ ಸಿಎಂ ಕಚೇರಿ ಟೀಕಿಸಿದೆ. ಅಲ್ಲದೆ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದು, ಕೃತ್ಯವನ್ನು ಕಳವಳಕಾರಿ, ದಿಗ್ಭ್ರಾಂತಿ ತರಿಸಿದೆ. ಮಾನವೀಯತೆ ಮರೆತು ಈ ರೀತಿ ವರ್ತಿಸಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಇದರ ಜೊತೆಗೆ ಸಿಎಂಒ ನಿರ್ದೇಶನಾನುಸಾರ ಶ್ರೀಕಾಕುಳಂ ಜಿಲ್ಲಾಧಿಕಾರಿ ಜೆ.ನಿವಾಸ್​ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಪಾಲಾಸಾ ಮುನ್ಸಿಪಲ್ ಕಮಿಷನರ್​ ಪಿ.ನಾಗೇಂದ್ರ ಕುಮಾರ್ ಮತ್ತು ಸ್ಯಾನಿಟರಿ ಇನ್​​ಸ್ಪೆಕ್ಟರ್ ಎನ್​.ರಾಜೀವ್ ಅವರನ್ನು ಅಮಾನತುಗೊಳಿಸಿದ್ದಾರೆ. ಸ್ಥಳೀಯರ ಒತ್ತಡಕ್ಕೆ ಮಣಿದು ಕಮಿಷನರ್ ಕುಮಾರ್​ ಆ ರೀತಿ ಕ್ರಮತೆಗೆದುಕೊಂಡಿದ್ದಾರೆ. ಮೃತರ ಕುಟುಂಬದ ಸದಸ್ಯರೂ ಈ ರೀತಿ ಅರ್ಥ್​ ಮೂವರ್​ ಮೂಲಕ ಶವ ಸಾಗಿಸುವುದಕ್ಕೆ ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಬೇಕಾದ್ದು ಆಯಾ ಸ್ಥಳೀಯಾಡಳಿತದ ಕರ್ತವ್ಯ. ಕೋವಿಡ್​ ಸೋಂಕಿತ ಮೃತರಾದ ಮೊದಲ ಪ್ರಕರಣವೇನಲ್ಲ ಇದು. ಸರಿಯಾದ ವಾಹನವನ್ನೇ ಬಳಸಬಹುದಿತ್ತು. ಇದುವರೆಗೆ ಜಿಲ್ಲೆಯಲ್ಲಿ ಇಂಥ ಆರು ಮರಣಗಳಾಗಿವೆ. ಕೆಲವು ಕೇಸ್​ಗಳಲ್ಲಿ ಕುಟುಂಬ ವರ್ಗವೇ ಜತೆಗೆ ಇರಲಿಲ್ಲ. ಕೆಲವು ಕೇಸ್​ಗಳಲ್ಲಿ ಕುಟುಂಬ ವರ್ಗಕ್ಕೆ ಸ್ಥಳೀಯಾಡಳಿತ ನೆರವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಕಾರಿನಲ್ಲಿ ಜೋಡಿಯ ಸೆಕ್ಸ್​; ವಿಡಿಯೋ ನೋಡಿದ ವಿಶ್ವಸಂಸ್ಥೆ ಶಾಕ್​…ದೃಶ್ಯದಿಂದ ಡಿಸ್ಟರ್ಬ್​ ಆದ ಯುನ್​ ವಕ್ತಾರ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts