ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹಾವು: ಬಾಯಿಗೆ ಬಾಯಿ ಹಾಕಿ ಉಸಿರು ನೀಡಿದ ಯುವಕ, ವಿಡಿಯೋ ವೈರಲ್​ | CPR to Snake

CPR to Snake
Published on

CPR to Snake : ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹಾವಿ ( Snake ) ಗೆ ಯುವಕ ( Young Man ) ನೊಬ್ಬ ಮರುಜೀವ ನೀಡಿ ರಕ್ಷಣೆ ಮಾಡಿರುವ ಘಟನೆ ಗುಜರಾತ್​ ರಾಜ್ಯದ ವಡೋದರಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಡೋದರಾ ಜಿಲ್ಲೆಯಲ್ಲಿ ಯಶ್ ತಾತ್ವಿ ಎಂಬ ಯುವಕ ಕಾಡುಪ್ರಾಣಿಗಳನ್ನು ರಕ್ಷಿಸುವ ಸೇವೆಯನ್ನು ಮಾಡುತ್ತಿದ್ದಾನೆ. ಸುಮಾರು ಎರಡು ಅಡಿ ಉದ್ದದ ಹಾವು ಸತ್ತು ಬಿದ್ದಿದೆ ಎಂಬ ದೂರವಾಣಿ ಕರೆಯನ್ನು ಸ್ವೀಕರಿಸಿದ ಬಳಿಕ ಯಶ್​ ತಾತ್ವಿ ಅವರು ತಕ್ಷಣ ಸ್ಥಳಕ್ಕೆ ತೆರಳುತ್ತಾರೆ. ಅಲ್ಲಿ ವಿಷಕಾರಿಯಲ್ಲದ ಹಾವು ಚಲನರಹಿತವಾಗಿ ಮಲಗಿರುವನ್ನು ನೋಡುತ್ತಾರೆ.

ಹಾವು ನೋಡಿದ ತಕ್ಷಣ ತಾತ್ವಿ ಅವರು ಹಾವಿನ ಬಾಯಿಗೆ ಬಾಯಿ ಹಾಕಿ ಸಿಪಿಆರ್ ( ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ) ಮಾಡಿ ಉಸಿರು ನೀಡುತ್ತಾರೆ. ಒಂದೆರೆಡು ನಿಮಿಷ ಈ ಪ್ರಯತ್ನ ಮಾಡಿದಾಗ ಹಾವಿಗೆ ಮತ್ತೆ ಜೀವ ಬರುತ್ತದೆ. ನಂತರ ಬದುಕುಳಿದ ಹಾವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ದೇಶ್​ಗುಜರಾತ್​ ( @DeshGujara ) ಹೆಸರಿನ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಯಶ್​ ತಾತ್ವಿಯ ನಿರ್ಭೀತ ಕೆಲಸಕ್ಕೆ ಅನೇಕ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net