blank

ನದಿ ದಡದಲ್ಲಿ ನಾಣ್ಯ, ನೋಟುಗಳು ಪತ್ತೆ! ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರಿಗೆ ಕಾದಿತ್ತು ಬಿಗ್​ ಶಾಕ್​ | Coins and Notes

Coins and Notes

ತಿರುವನಂತಪುರಂ: ನದಿ ದಡದಲ್ಲಿ ಸಾಕಷ್ಟು ನಾಣ್ಯಗಳು ಮತ್ತು ನೋಟುಗಳು ( coins and notes ) ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಅವರು ನಡೆದುಕೊಂಡ ರೀತಿ ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಕೇರಳದಲ್ಲಿ ನಡೆದಿದೆ. ಇಲ್ಲಿನ ತಣ್ಣಿಮಡು ಚಿರೈಂಕೋಣತ್ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ನದಿಯ ದಡದಲ್ಲಿ ನಾಣ್ಯಗಳು ಮತ್ತು ನೋಟುಗಳು ಪತ್ತೆಯಾಗಿವೆ. ಇದನ್ನು ನೋಡಿದ ಸ್ಥಳೀಯರು ನೆಡುಮಂಗಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ತೆಯಾಗಿರುವ ಹಣ ಕಳ್ಳತನವಾಗಿದೆಯೇ ಎಂಬ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ₹80 ಸಾವಿರ ದಾಟಿದ ಚಿನ್ನದ ದರ; ಸಾರ್ವಕಾಲಿಕ ಗರಿಷ್ಠಕ್ಕೆ ಬಂಗಾರದ ಬೆಲೆ

ಕಳೆದ ಕೆಲ ದಿನಗಳಿಂದ ಈ ಭಾಗದ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಪತ್ತೆಯಾಗಿರುವ ಹಣ ದೇವಸ್ಥಾನಗಳಿಂದ ಕದ್ದ ಹಣವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಕಾರಣಕ್ಕೆ ಸ್ಥಳೀಯರು ಸೂಕ್ತ ತನಿಖೆ ಆಗ್ರಹಿಸಿದ್ದಾರೆ.

ಆದರೆ, ನಾಣ್ಯಗಳು ಮತ್ತು ನೋಟುಗಳು ಪತ್ತೆಯಾದ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯ ನಿವಾಸಿಗಳು ಅಥವಾ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ ಮತ್ತು ಸ್ಥಳವನ್ನು ಮಹಜರು ಮಾಡದೇ, ಕೇವಲ ಪ್ಲಾಸ್ಟಿಕ್ ಕವರ್‌ಗಳಲ್ಲಿ ನಾಣ್ಯ ಮತ್ತು ನೋಟುಗಳನ್ನು ತುಂಬಿಕೊಂಡು ಹೋದರು. ಪೊಲೀಸರ ಈ ನಡೆಯನ್ನು ಕಂಡ ಜನರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ. ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ, ಪೊಲೀಸರು ಈ ಪ್ರಕರಣದಲ್ಲಿ ಇನ್ನು ಯಾವುದೇ ತನಿಖೆ ಆರಂಭಿಸಿಲ್ಲ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ಖಾಸಗಿ ವಿಡಿಯೋ ಸೋರಿಕೆ ಹಿಂದೆ ಆತನ ಕೈವಾಡ ಇದೆ: ನಟಿ ಓವಿಯಾ ಸ್ಫೋಟಕ ಹೇಳಿಕೆ | Oviya Leaked

ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ಮಗಳು ಹೇಗಿದ್ದಾರೆ ನೋಡಿ: ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ | VVS Laxman

Share This Article

ಊಟ ಮಾಡುವಾಗ ಅಪ್ಪಿತಪ್ಪಿಯು ಈ 12 ತಪ್ಪುಗಳನ್ನು ಮಾಡಲೇಬೇಡಿ: ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತೆ! Eating Mistakes

Eating Mistakes : ಅನೇಕ ಜನರು ಆಹಾರವನ್ನು ತಿನ್ನುವಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ ಮತ್ತು ಅಂತಹ…

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…