ರಾಮನಗರದಲ್ಲಿ ಚರ್ಮ, ಮಾಂಸಕ್ಕಾಗಿ ಹಸುಗಳ ಕಳ್ಳತನ

cow
ಸಾಂದರ್ಭಿಕ ಚಿತ್ರ
Published on

ರಾಮನಗರ: ಬೆಳಗ್ಗೆ ಎದ್ದಾಗ ನಿತ್ಯವೂ ಹುಲ್ಲು, ಮೇವು, ಅಕ್ಕಚ್ಚು ಕೊಟ್ಟು ಸಾಕಿ ಹುಷಾರು ತಪ್ಪಿದ್ದಾಗ ವೈದ್ಯರನ್ನು ಕರೆದು ಉಪಚಾರ ಮಾಡಿಸುತ್ತಿದ್ದ ಹಸುಗಳು ಕಾಣೆ ಆದರೆ ಹೇಗೆನಿಸಬಹುದು? ಇಂತಹದೇ ಅನುಭವ ರಾಮನಗರದಲ್ಲಿನ ಈ ರೈತ ಕುಟುಂಬಕ್ಕೆ ಆಗಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಗೀನಗೆರೆ ಗ್ರಾಮದಲ್ಲಿ ನಡೆದಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ 4 ಹಸುಗಳನ್ನು ಕದ್ದೊಯ್ಯಲಾಗಿದೆ. ಈ ಕಳ್ಳರು, ಹಸುಗಳನ್ನು ಕದ್ದು ಗ್ರಾಮದ ಹೊರವಲಯದಲ್ಲಿ ಹತ್ಯೆ ಮಾಡಿ ಮಾಂಸ ಹೊತ್ತೊಯ್ದಿದ್ದಾರೆ. ಕದಿಯಲಾದ ಹಸುಗಳು ರೈತ ರಾಮಯ್ಯ ಎಂಬುವವರಿಗೆ ಸೇರಿದವು.

ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಹಸುಗಳ ರಾತ್ರೋರಾತ್ರಿ ಕಳ್ಳತನ ಮಾಡಲಾಗಿದ್ದು, ಹಸುಗಳನ್ನು ಗ್ರಾಮದ ಹೊರವಲಯದಲ್ಲಿ ಕೊಂದು ಮಾಂಸ ಹಾಗೂ ಚರ್ಮವನ್ನು ಬೇರ್ಪಡಿಸಿ ಉಳಿದ ಶರೀರದ ಭಾಗಗಳನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾರೆ.

ಈ ಸಂಬಂಧ ರೈತ ರಾಮಯ್ಯ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 2ಲಕ್ಷ ಬೆಲೆಬಾಳುವ ಹಸುಗಳನ್ನು ಕಳೆದುಕೊಂಡು ರಾಮಯ್ಯ ಕಂಗಾಲಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ, ಸೂಕ್ತ ಪರಿಹಾರ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net