ಪ್ರಣಬ್​ ಮುಖರ್ಜಿಯವರ ಜೀವ ಹೋಗಲು ಕೊವಿಡ್​-19 ಮುಖ್ಯ ಕಾರಣವಲ್ಲ...

Pranab Mukharjee
Published on

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ನಿನ್ನೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ 20 ದಿನಗಳ ಹಿಂದೆ ಮಿದುಳು ಸರ್ಜರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಕೊವಿಡ್​-19 ಸೋಂಕು ಇರುವುದು ದೃಢಪಟ್ಟಿತ್ತು.

ಮಿದುಳು ಸರ್ಜರಿ ಆಗುತ್ತಿದ್ದಂತೆ ಅವರ ಆರೋಗ್ಯವೂ ಹದಗೆಟ್ಟು ಸಂಪೂರ್ಣ ಕೋಮಾಕ್ಕೆ ಜಾರಿದ್ದರು. ನಿನ್ನೆ ಅವರು ಮೃತಪಟ್ಟ ನಂತರ ಕೊವಿಡ್​-19ನಿಂದ ಸಾವನ್ನಪ್ಪಿದ್ದಾರೆ ಎಂದು ಅನೇಕರು ಹೇಳಿದ್ದರು.

ಆದರೆ ಪ್ರಣಬ್​ ಮುಖರ್ಜಿ ಜೀವ ಹೋಗಿದ್ದು ಕರೊನಾ ಸೋಂಕಿನಿಂದ ಅಲ್ಲ, ಬದಲಿಗೆ ಮಿದುಳು ಸರ್ಜರಿಯಾಗಿದ್ದೇ ಕಾರಣ ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: video/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಜಿತ್​ ಅವರು, ನನ್ನ ತಂದೆ ಕುಟುಂಬದ ಅತಿ ದೊಡ್ಡ ಶಕ್ತಿಯಾಗಿದ್ದರು. ನಾವೆಲ್ಲರೂ ಅವರನ್ನು ತುಂಬ ಮಿಸ್​ ಮಾಡಿಕೊಳ್ಳುತ್ತೇವೆ. ಅವರ ಸಾವಿಗೆ ಕರೊನಾ ಮುಖ್ಯ ಕಾರಣವಲ್ಲ ಎಂದು ಹೇಳಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಅವರು ಹೊರಗಿನವರನ್ನು ಯಾರನ್ನೂ ಭೇಟಿಯಾಗಿಲ್ಲ. ನಾವೂ ಕೂಡ ಕೊವಿಡ್​-19 ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಆದರೆ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಅದು ಜೀವ ತೆಗೆಯುವಷ್ಟೆಲ್ಲ ಅವರನ್ನು ಬಾಧಿಸಲಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net