

ಮಧುರೈ: ಶ್ರೀಲಂಕಾಕ್ಕೆ 180 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಮೆಥಾಂಫೆಟಮೈನ್ ಅನ್ನು ರೈಲಿನಲ್ಲಿ ಸಾಗಿಸಲು ಕೊಂಡೊಯ್ಯುತ್ತಿದ್ದ ದಂಪತಿಯನ್ನು ಮಧುರೈನಲ್ಲಿ ಸಹ ಪ್ರಯಾಣಿಕರೊಬ್ಬರು ಪತ್ತೆಹಚ್ಚಿದ್ದು, ಆರೋಪಿಗಳಿಂದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಡಿಆರ್‌ಐ ಅಧಿಕಾರಿಗಳು ಓರ್ವ ವ್ಯಕ್ತಿ ಮತ್ತು ಆತನ ಪತ್ನಿಯನ್ನು ಪ್ರಕರಣದಡಿ ಬಂಧಿಸಿದ್ದಾರೆ.
ಒಟ್ಟು 36 ಕೆಜಿ ಮಾದಕವಸ್ತುವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು ಮಧುರೈ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಂದ ವಶಪಡಿಸಿಕೊಂಡಿದ್ದು, ಚೆನ್ನೈನ ಕೊಡುಂಗೈಯೂರ್ ಡಂಪ್ ಯಾರ್ಡ್‌ನಿಂದ ಮತ್ತೊಂದು ಆರು ಕೆಜಿ ಬ್ಯಾಗ್ ಅನ್ನು ವಶಕ್ಕೆ ಪಡೆದಿದೆ. ಇದು ಕಿಡಿಗೇಡಿಗಳ ಪೂರ್ವ ಪ್ಲ್ಯಾನ್ ಆಗಿದ್ದು, ಸದ್ಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಂಸ್ಥೆ ತಿಳಿಸಿದೆ.
ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಮೌಲ್ಯ ಅಂದಾಜು 180 ಕೋಟಿ ರೂ. ಆಗಿದ್ದು, ದಂಪತಿಯನ್ನು ಬಂಧಿಸಲಾಗಿದೆ. "ಐಸ್" ಅಥವಾ "ಕ್ರಿಸ್ಟಲ್ ಮೆಥ್" ಎಂದೂ ಕರೆಯಲ್ಪಡುವ ಮೆಥಾಂಫೆಟಮೈನ್ ಹೆಚ್ಚು ವ್ಯಸನಕಾರಿ ಸೈಕೋಸ್ಟಿಮ್ಯುಲಂಟ್ ಡ್ರಗ್ ಆಗಿದ್ದು, ಇದು ಕೊಕೇನ್‌ನಂತೆಯೇ ಶಕ್ತಿಯುತವಾದ ಯೂಫೋರಿಕ್ ಪರಿಣಾಮಗಳನ್ನು ಪ್ರದರ್ಶಿಸುತ್ತದೆ, ಇದು ಮಾರಣಾಂತಿಕ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 29ರಂದು ಚೆನ್ನೈನಿಂದ ಮಧುರೈಗೆ ತೆರಳುತ್ತಿದ್ದ ಪೋತಿಗೈ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರೊಬ್ಬರು ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದ್ದೇ ತಡ ಡಿಆರ್‌ಐ ಚೆನ್ನೈ ವಲಯದ ಅಧಿಕಾರಿಗಳು ಆರೋಪಿಗಾಗಿ ಬಲೆ ಬೀಸಿದ್ದು, ಶುಕ್ರವಾರ (ಮಾ.01) ಬೆಳಗ್ಗೆ ರೈಲು ತನ್ನ ಅಂತಿಮ ನಿಲ್ದಾಣಕ್ಕೆ ತಲುಪಿದ ತಕ್ಷಣವೇ ಪ್ರಯಾಣಿಕನನ್ನು ಗುರುತಿಸಿ, ಆರ್‌ಪಿಎಫ್ ಅಧಿಕಾರಿಗಳ ಸಹಾಯದಿಂದ ಅವನ ಬಳಿಯಿದ್ದ ಒಟ್ಟು 30 ಕೆಜಿ ತೂಕದ 15 ಪ್ಯಾಕೆಟ್‌ಗಳು ವಶಪಡಿಸಿಕೊಂಡಿತು. ಪರೀಕ್ಷೆಯಲ್ಲಿ ಅದು ಮೆಥಾಂಫೆಟಮೈನ್ ಎಂದು ತಿಳಿದುಬಂದಿದೆ,(ಏಜೆನ್ಸೀಸ್).