More

    ಆಧಾರ್ ಲಿಂಕ್ ಆಗಿರುವ ಫೋನ್ ತನ್ನಿ ಅಂದ್ರೆ…..ಈ ಮುಗ್ಧ ಅಜ್ಜ ತಂದಿದ್ದೇನು ಗೊತ್ತೇ? ನಿಜಕ್ಕೂ ಪಾಪ ಅನಿಸುತ್ತೆ

    ಬೆಂಗಳೂರು: ಇದು ಡಿಜಿಟಲ್ ಯುಗ ಎಂಬ ವಿಷಯ ಸದ್ಯ ಎಲ್ಲರಿಗೂ ತಿಳಿದಿರುವ ಸಂಗತಿ. ಬಹಳ ವೇಗವಾಗಿ ಚಲಿಸುತ್ತಿರುವ ಟೆಕ್ನಾಲಜಿಯ ಕಾಲದಲ್ಲಿ ಎಲ್ಲವೂ ಆನ್​ಲೈನ್ ಮಯವಾಗಿದೆ. ಬ್ಯಾಂಕ್ ಕೆಲಸಗಳಿಂದ ಹಿಡಿದು ಒಂದು ತರಕಾರಿ ತರುವುದಕ್ಕೂ ಡಿಜಿಟಲ್ ಪೇಮೆಂಟ್ಸ್ ಬಳಕೆ ಹೆಚ್ಚಿದೆ. ಹಾಗಾಗಿ ಅಂತರ್ಜಾಲ ವಹಿವಾಟುಗಳು ಇಂದು ಹೆಚ್ಚು ಚಾಲ್ತಿಯಲ್ಲಿದೆ.

    ಇದನ್ನೂ ಓದಿ: ಧೋನಿಯ ತದ್ರೂಪಿ ಕಂಡು ತಬ್ಬಿಬ್ಬಾದ ಫ್ಯಾನ್ಸ್​! ಇಲ್ಲಿದೆ ನೋಡಿ ವೈರಲ್ ವಿಡಿಯೋ

    ಆಧಾರ್​ ಕಾರ್ಡ್​, ಪಡಿತರ ಚೀಟಿ, ಪಾವತಿ, ದಾಖಲಾತಿ ನೋಂದಣಿ, ಅರ್ಜಿ, ಬ್ಯಾಂಕ್ ವಿವರ ಹೀಗೆ ಹತ್ತು ಹಲವಾರು ಕೆಲಸಗಳು ಈಗ ನಡೆಯುತ್ತಿರುವುದು ಆನ್​ಲೈನ್​ನಲ್ಲಿ ಮಾತ್ರ. ಆನ್​ಲೈನ್​ ವಹಿವಾಟುಗಳು ಬಹುಸಂಖ್ಯೆಯಲ್ಲಿ ಚಾಲ್ತಿಯಲ್ಲಿರುವುದರಿಂದ ಈ ವ್ಯವಸ್ಥೆ ಈಗ ಎಲ್ಲಾ ನಾಗರಿಕರಿಗೂ ಅನುಕೂಲವೇ ಆಗಿದೆ. ಅದರಲ್ಲೂ ವಿದ್ಯಾರ್ಹತೆ ಹೊಂದಿರುವವರು, ಕನಿಷ್ಟ ಓದಲು, ಬರೆಯಲು ಬರುವವರಿಗೂ ಇದು ತುಂಬ ಉಪಯುಕ್ತವಾಗಿದೆ.

    ಡಿಜಿಟಲ್​ ಯುಗವಾದ ಮೇಲೆಂತೂ ಸಿಟಿ ಜನರು ಇದರ ಸದುಪಯೋಗವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಗ್ರಾಮೀಣ ಭಾಗಗಳಲ್ಲಿಯೂ ಉಪಯೋಗವಾಗುತ್ತಿದೆ. ಆದರೆ ಇಂದಿಗೂ ಹಳ್ಳಿಯಲ್ಲಿರುವ ಅನೇಕ ಹಿರಿಯರಿಗೆ ಇದು ದೊಡ್ಡ ಸವಾಲಾಗಿ ಕಾಡುತ್ತಿದೆ. ಕಾರಣ, ಆಧಾರ್ ಸಂಖ್ಯೆ​ ಲಿಂಕ್ ಆಗಿರುವ ಫೋನ್ ನಂಬರ್ ಈಗ ಎಲ್ಲಾ ಕೆಲಸಕ್ಕೂ ಅತ್ಯಗತ್ಯವಾಗಿದೆ.

    ಇದನ್ನೂ ಓದಿ: Rajyasabha Election: ಶುರುವಾದ ಮತದಾನ; ಮೊದಲು ಮತ ಚಲಾಯಿಸಿದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್

    ಗ್ರಾಮೀಣ ಭಾಗದಲ್ಲಿ ವಯಸ್ಸಾದ ವೃದ್ಧರಿಗೆ ಇದರ ಬಗ್ಗೆ ಇಂದಿಗೂ ಹೆಚ್ಚಿನ ಮಾಹಿತಿ ಇಲ್ಲ. ಇದ್ದರೂ ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ಓದಲು, ಬರೆಯಲು ಬಾರದ ವೃದ್ಧರು ನಾಡಕಛೇರಿ, ಆಧಾರ್​ ಕಛೇರಿಗಳಿಗೆ ಹೋದರೆ ಏನು ಕೊಡಬೇಕು ಎಂಬುದನ್ನು ಮರೆಯುತ್ತಾರೆ. ಅದೇ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದ್ದು, ಹಿರಿಯರೊಬ್ಬರು ತಮ್ಮ ಆಧಾರ್ ಲಿಂಕ್ ಆಗಿರುವ ಫೋನ್ ತೆಗೆದುಕೊಂಡು ಬನ್ನಿ ಎಂದರೆ, ಮನೆಯಲ್ಲಿದ್ದ ಲ್ಯಾಂಡ್ ಲೈನ್ ತಂದಿದ್ದಾರೆ.

    ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಅಜ್ಜನಿಗೆ ನೀವು ಬರುವಾಗ ಒಟಿಪಿಗಾಗಿ ನಿಮ್ಮ ಆಧಾರ್ ಲಿಂಕ್ ಸಂಖ್ಯೆ ನೋಂದಣಿಯಾಗಿರುವ ಫೋನ್ ತನ್ನಿ ಎಂದು ಹೇಳಿ ಕಳಿಸಿದ್ದಾಳೆ. ಇದನ್ನು ಆಲಿಸಿದ ವೃದ್ಧ ತಮ್ಮ ಮನೆಯಲ್ಲಿದ್ದ ಲ್ಯಾಂಡ್​ಲೈನ್ ಫೋನ್ ಅನ್ನು ನೇರವಾಗಿ ಯುವತಿಗೆ ತಂದುಕೊಟ್ಟಿದ್ದಾರೆ. ಇದ್ಯಾಕೆ ಎಂದು ಕೇಳಿದ್ರೆ, ಫೋನ್ ತರಲು ಹೇಳಿದ್ರಲ್ಲ ಎಂದು ಹೇಳಿದ್ದಾರೆ, ಇದನ್ನು ಕಂಡ ಯುವತಿ ಮತ್ತಿತರರು ನಸುನಕ್ಕಿದ್ದಾರೆ.

    ಇದನ್ನೂ ಓದಿ: ಮಕ್ಕಳು ದುಡಿಯಲ್ಲ, ಎತ್ತುಗಳು ಹೋಗಲ್ಲ; ಅನ್ನದಾತರ ಗೋಳು ಕೇಳುವವರಿಲ್ಲ!

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಾಪ ಎಷ್ಟು ಮುಗ್ಧರು, ಅವರಿಗೆ ಯಾರಾದರೂ ಹೇಳಿಕೊಡಿ ಎಂದೆಲ್ಲಾ ಕಮೆಂಟ್ ಮಾಡಿ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಈ ಡ್ರೈ ಫ್ರೂಟ್​ಗಳನ್ನು ಸೇವಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts