More

    ರೆಡ್​ಕ್ರಾಸ್​ ಸಂಸ್ಥೆ ಮಾನವೀಯ ಸೇವೆ ಶ್ಲಾಘನೀಯ

    ಉಡುಪಿ: ರೆಡ್​ಕ್ರಾಸ್​ ಸಂಸ್ಥೆಯ ಸ್ವಯಂಸೇವಕರು ಯುದ್ಧ, ನೆರೆ ಮತ್ತು ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಮಾನವೀಯತೆಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​. ಹೇಳಿದರು.

    ಬುಧವಾರ ನಗರದ ಬ್ರಹ್ಮಗಿರಿಯ ರೆಡ್​ಕ್ರಾಸ್​ ಭವನದ ಹೆನ್ರಿ ಡ್ಯುನಾಂಟ್​ ಹಾಲ್​ನಲ್ಲಿ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಘಟಕ ವತಿಯಿಂದ ನಡೆದ ವಿಶ್ವ ರೆಡ್​ಕ್ರಾಸ್​ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಸಮಾಜದ ಒಳಿತಿಗಾಗಿ ಕೆಲಸ ನಿರ್ವಹಿಸುವ ಜನರನ್ನು ಗೌರವಿಸುವುದು ಈ ದಿನದ ವಿಶೇಷ. ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರಪಂಚದಾದ್ಯಂತ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಸ್ವಯಂಸೇವಕರಿಗೆ ರೆಡ್​ಕ್ರಾಸ್​ ದಿನಾಚರಣೆ ಆಚರಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದರು.

    ಪ್ರತಿಯೊಬ್ಬರ ಜೀವನದಲ್ಲಿಯೂ ಕಾನೂನು ಮಹತ್ತರ ಪಾತ್ರ ವಹಿಸುತ್ತದೆ. ಹುಟ್ಟಿನಿಂದ ಸಾಯುವವರೆಗೂ ಕಾನೂನು ನಮ್ಮ ಸುತ್ತಲೂ ಸುತ್ತುತ್ತಿರುತ್ತದೆ. ಗೊತ್ತು ಗೊತ್ತಿಲ್ಲದಂತೆ ಪ್ರತಿನಿತ್ಯ ನಾವು ಕಾನೂನಿನ ಅಡಿಯಲ್ಲಿ ಜೀವಿಸುತ್ತಿದ್ದೇವೆ. ಜನಸಾಮಾನ್ಯರು ಕ್ಷುಲ್ಲಕ ಕಾರಣಕ್ಕೆ ನ್ಯಾಯಾಲಯಕ್ಕೆ ತೆರಳುವಂತಾಗಬಾರದು. ಲೋಕ ಅದಾಲತ್​ನಲ್ಲಿಯೂ ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಮಾತನಾಡಿ, ಪ್ರಪಂಚದಲ್ಲಿಯೇ ಮಾನವೀಯ ನೆಲೆಯಲ್ಲಿ ಸೇವೆ ಮಾಡುವ ಭಾರತೀಯ ರೆಡ್​ಕ್ರಾಸ್​ ಜಗತ್ತಿನ ಸುಮಾರು 192 ದೇಶಗಳಲ್ಲಿ ಪಸರಿಸಿದ್ದು, 4 ಬಾರಿ ನೊಬೆಲ್​ ಪ್ರಶಸ್ತಿ ಪಡೆದಿದೆ ಎಂದರು.

    ಸಾಧಕರಾದ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್​, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್​, ವೈದ್ಯೆ ಡಾ. ಗಿರಿಜ ಮತ್ತು ಜಿ. ಶಂಕರ್​ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್​ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ರೆಡ್​ಕ್ರಾಸ್​ ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯ ವಿ. ಜಿ. ಶೆಟ್ಟಿ, ಉಪಸಭಾಪತಿ ಡಾ. ಅಶೋಕ್​ ಕುಮಾರ್​ ವೈ.ಜಿ. ಉಪಸ್ಥಿತರಿದ್ದರು. ರೆಡ್​ಕ್ರಾಸ್​ ಗೌರವ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ನಿರೂಪಿಸಿದರು. ಖಚಾಂಚಿ ರಮಾದೇವಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts