More

  ಲಂಚ ಪ್ರಕರಣದಲ್ಲಿ ಮಾಜಿ ತೆರಿಗೆ ಅಧಿಕಾರಿಗೆ ಸಿಬಿಐ ಕೋರ್ಟ್ ಶಿಕ್ಷೆ: 3 ವರ್ಷ ಜೈಲು, 5 ಲಕ್ಷ ರೂಪಾಯಿ ದಂಡ

  ಬೆಂಗಳೂರು: ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಬುಧವಾರ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆ (ಜಿಎಸ್‌ಟಿ) ಮಾಜಿ ಸೂಪರಿಂಟೆಂಡೆಂಟ್​ ಅವರನ್ನು ಲಂಚ ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ಘೋಷಿಸಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

  2015-2016ನೇ ಹಣಕಾಸು ವರ್ಷದ ತೆರಿಗೆ ಮತ್ತು ದಂಡವನ್ನು ಮನ್ನಾ ಮಾಡಲು ದೂರುದಾರರಿಂದ 25,000 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಉತ್ತರ ಕನ್ನಡ ಹೊನ್ನಾವರ ವ್ಯಾಪ್ತಿಯ ಜಿತೇಂದ್ರ ಕುಮಾರ್ ಡಾಗೂರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

  ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ. ತನಿಖೆಯ ನಂತರ, ಸಿಬಿಐ ಅಧಿಕಾರಿಗಳು ಆಗಸ್ಟ್ 2021 ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆಯ ನಂತರ ನ್ಯಾಯಾಲಯವು ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಹೊನ್ನಾವರದ ಜಗದೀಶ ಭಾವೆ ಅವರು ದೂರು ದಾಖಲಿಸಿದ್ದರು.

   

   

   

  ಕರಡಿಯ ಕುಣಿತದಿಂದ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ: ಸತತ 5ನೇ ದಿನ ಕುಸಿತವೇಕೆ?

  ಸಲ್ಮಾನ್ ಖಾನ್​ಗೆ ಗುಂಡು ಹಾರಿಸಿದರೆ ಸಿಗುತ್ತದೆ ಪುಣ್ಯ: ಐದನೇ ಆರೋಪಿ ಬಂಧನದ ನಂತರ ಸ್ಫೋಟಕ ಮಾಹಿತಿ ಬಹಿರಂಗ

  https://www.vijayavani.net/why-is-the-price-of-adani-company-shares-continuously-increasing-what-do-market-experts-say

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts