More

    ಸಲ್ಮಾನ್ ಖಾನ್​ಗೆ ಗುಂಡು ಹಾರಿಸಿದರೆ ಸಿಗುತ್ತದೆ ಪುಣ್ಯ: ಐದನೇ ಆರೋಪಿ ಬಂಧನದ ನಂತರ ಸ್ಫೋಟಕ ಮಾಹಿತಿ ಬಹಿರಂಗ

    ಮುಂಬೈ: ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯಲ್ಲಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗವು ಐದನೇ ಆರೋಪಿಯನ್ನು ಬಂಧಿಸಿದೆ.

    ಮೊಹಮ್ಮದ್ ರಫೀಕ್ ಚೌಧರಿ ಎಂದು ಗುರುತಿಸಲಾದ ಆರೋಪಿಯು ಸಲ್ಮಾನ್ ಖಾನ್ ಅವರ ಮನೆಯನ್ನು ಹೊರತುಪಡಿಸಿ ಇತರ ಇಬ್ಬರು ನಟರ ಮನೆಗಳ ಹೊರಗೆ ಸುತ್ತಾಡಿದ್ದ ಎಂದು ಮುಂಬೈ ಕ್ರೈಂ ಬ್ರಾಂಚ್ ಹೇಳಿದೆ.

    ಭೂಗತ ಪಾತಕಿ ಅನ್ಮೋಲ್ ಬಿಷ್ಣೋಯ್ ಈ ಕಾರ್ಯ ಪೂರ್ಣಗೊಳಿಸಿದರೆ ಪುಣ್ಯ ದೊರೆಯುತ್ತದೆ ಎಂದು ಭರವಸೆ ನೀಡಿದ ನಂತರ ಶೂಟರ್‌ಗಳಾದ ಪಾಲ್ ಮತ್ತು ಗುಪ್ತಾ ಗುಂಡಿನ ದಾಳಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    “ಆರೋಪಿ ಮೊಹಮ್ಮದ್ ರಫೀಕ್ ಚೌಧರಿ, ಸಲ್ಮಾನ್ ಖಾನ್ ಅವರ ಮನೆಯ ಹೊರತಾಗಿ ಇತರ ಇಬ್ಬರು ನಟರ ಮನೆಗಳ ಹೊರಗೆ ಸಂಚಾರ ಮಾಡಿದ್ದಾರೆ. ಅವರು ಸಲ್ಮಾನ್ ಖಾನ್ ಅವರ ಮನೆಯ ವೀಡಿಯೊವನ್ನು ಚಿತ್ರೀಕರಿಸಿದರು, ನಂತರ ಅದನ್ನು ಪಾತಕಿ ಅನ್ಮೋಲ್ ಬಿಷ್ಣೋಯ್​ಗೆ ಕಳುಹಿಸಿದರು. ಶೂಟರ್​ಗಳಾದ ಪಾಲ್ ಮತ್ತು ಗುಪ್ತಾ ಆತಂಕಕ್ಕೊಳಗಾಗಿದ್ದರು. ಈ ಗುಂಡಿನ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಅವರು ಪುಣ್ಯವನ್ನು ಪಡೆಯುತ್ತಾರೆ ಎಂದು ಬಿಷ್ಣೋಯ್ ಅವರಿಗೆ ಭರವಸೆ ನೀಡಿದ್ದ. ಇನ್ನೂ ಇಬ್ಬರು ನಟರ ಮನೆಗಳ ಹೊರಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಕ್ರೈಂ ಬ್ರಾಂಚ್ ಹೇಳಿದೆ.

    ಏತನ್ಮಧ್ಯೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಫೈರಿಂಗ್ ಪ್ರಕರಣದಲ್ಲಿ ಬಂಧನದ ನಂತರ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಅನುಜ್ ಕುಮಾರ್ ಅವರ ಎರಡನೇ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೊಸದಾಗಿ ಪರೀಕ್ಷೆ ನಡೆಸುವಂತೆ ಅನುಜ್ ಕುಮಾರ್ ಅವರ ತಾಯಿ ರೀತಾ ದೇವಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ನಿರ್ದೇಶನ ನೀಡಲಾಗಿದೆ. ಮೇ 10 ಅಥವಾ ಅದಕ್ಕೂ ಮೊದಲು ಫರೀದ್‌ಕೋಟ್‌ನಲ್ಲಿರುವ ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಮೃತದೇಹವನ್ನು ಹಸ್ತಾಂತರಿಸುವಂತೆ ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಅವರ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿದೆ.

    ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು.

    ಅನನ್ಯಾ ಪಾಂಡೆ ಜತೆ ಬ್ರೇಕಪ್: ಆದಿತ್ಯಾ ರಾಯ್ ಕಪೂರ್ ಡೇಟಿಂಗ್ ಈಗ ಯಾರೊಂದಿಗೆ?

    ಭಾರತದಲ್ಲಿ ಹಿಂದೂ ಧರ್ಮಿಯರ ಜನಸಂಖ್ಯೆ 7.8% ಕುಸಿತ; ಮುಸ್ಲಿಮರು 43.15%; ಕ್ರಿಶ್ಚಿಯನ್ನರು 5.38% ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts