More

    ಧೋನಿಯ ತದ್ರೂಪಿ ಕಂಡು ತಬ್ಬಿಬ್ಬಾದ ಫ್ಯಾನ್ಸ್​! ಇಲ್ಲಿದೆ ನೋಡಿ ವೈರಲ್ ವಿಡಿಯೋ

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವಿನ ಕಿಕ್​ಸ್ಟಾರ್ಟ್​ ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳ ಬಹಳ ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್​ನ 10 ತಂಡಗಳು ಕೂಡ ತಮ್ಮ ಮುಂಬರುವ ಪಂದ್ಯಗಳಿಗಾಗಿ ಸಕಲ ತಯಾರಿ ನಡೆಸುತ್ತಿದ್ದು, 2024ರ ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳುವ ಮಹಾದಾಸೆಯೊಂದಿಗೆ ಕಣಕ್ಕಿಳಿಯಲಿವೆ.

    ಇದನ್ನೂ ಓದಿ: ಹನುಮ ವಿಹಾರಿ ಆಂಧ್ರ ಕ್ರಿಕೆಟ್ ಟೀಮ್ ತೊರೆಯಲು ಸಿಎಂ ಜಗನ್​ ಕಾರಣ: ತೆಲುಗು ದೇಶಂ ಪಕ್ಷ ನೇರ ಆರೋಪ

    ಐದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್​ಕೆ ತಂಡದ ಮೇಲೆ ಭಾರೀ ನಿರೀಕ್ಷೆ ವ್ಯಕ್ತವಾಗಿದ್ದು, ಕಳೆದ ಬಾರಿಯಂತೆ ಈ ಸಲ ಕೂಡ ಧೋನಿ ತಂಡವೇ ಐಪಿಎಲ್ ಟ್ರೋಫಿ ಪಡೆಯಲಿದ್ದಾರೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ. 2023ರ ಐಪಿಎಲ್​ ಆವೃತ್ತಿಯೇ ಎಂ.ಎಸ್​ ಧೋನಿ ಅವರ ಕಡೆಯ ಸೀಸನ್ ಎಂದು ಹೇಳಲಾಗಿತ್ತು. ಆದರೆ ಇದನ್ನು ತಲೆಕೆಳಗೆ ಮಾಡಿದ ಸಿಎಸ್​ಕೆ ಕ್ಯಾಪ್ಟನ್, ಈ ವರ್ಷವೂ ತಮ್ಮ ಕ್ಯಾಪ್ಟನ್ಸಿಯನ್ನು ಮುಂದುವರೆಸುವ ಮೂಲಕ ಅಭಿಮಾನಿಗಳನ್ನು ಮನರಂಜಿಸಲು ಕ್ರೀಡಾಂಗಣಕ್ಕೆ ಎಂಟ್ರಿ ಕೊಡಲಿದ್ದಾರೆ.

    ಸದ್ಯ ಮಾರ್ಚ್​ 22ರಂದು ಶುಭಾರಂಭಗೊಳ್ಳುವ ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯಕ್ಕಾಗಿ ಕಾಯುತ್ತಿರುವ ಧೋನಿ ಅಭಿಮಾನಿಗಳಿಗೆ ಇದೀಗ ಭಾರೀ ಅಚ್ಚರಿ ಎದುರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಥೇಟ್​ ಧೋನಿ ಅವರಂತೆ ಕಾಣಿಸುವ ವ್ಯಕ್ತಿಯೊಬ್ಬ ಕಂಡಿದ್ದಾನೆ. ಈತ ಮಾಹಿ ಅವರ ತದ್ರೂಪಿಯಾಗಿದ್ದು, ಮುಖಲಕ್ಷಣದಲ್ಲಿ ಅವರನ್ನೇ ಹೋಲಿಕೆ ಮಾಡುತ್ತಾರೆ.

    ಇದನ್ನೂ ಓದಿ:  ಸೆಮಿಫೈನಲ್​ಗೆ ಲಗ್ಗೆಯಿಟ್ಟ ಮೂರು ಬಾರಿಯ ಚಾಂಪಿಯನ್ ಪಟನಾ

    ಒಂದು ನಿಮಿಷ ಈ ವಿಡಿಯೋ ನೋಡಿ ನೆಟ್ಟಿಗರು ಹಾಗೂ ಧೋನಿ ಅಭಿಮಾನಿಗಳು ಶಾಕ್ ಆಗಿದ್ದು, ಇವರು ಮಾಹಿಯನ್ನು ಹೋಲುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts