

ನವದೆಹಲಿ: ದೇಶದಲ್ಲಿ ಲಾಕ್ಡೌನ್ ಅವಧಿ ವಿಸ್ತರಣೆಯಾಗುತ್ತಿದೆ..ಮತ್ತೊಂದು ಕಡೆ ಕರೊನಾ ಸೋಂಕಿನ ಪ್ರಮಾಣವೂ ಹೆಚ್ಚುತ್ತಲೇ ಇದೆ. ಮಾರಕ ಸೋಂಕಿಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 1500ರ ಗಡಿ ದಾಟಿದೆ.
ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 46,433ಕ್ಕೆ ಏರಿದ್ದು, 1568 ಮಂದಿ ಮೃತಪಟ್ಟಿದ್ದಾರೆ. 12, 727 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸದ್ಯ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಅಲ್ಲಿ 14, 541 ಮಂದಿ ಸೋಂಕಿತರು ಇದ್ದು, 583 ಜನ ಸಾವನ್ನಪ್ಪಿದ್ದಾರೆ. ಹಾಗೇ ಎರಡನೇ ಸ್ಥಾನದಲ್ಲಿ ಗುಜರಾತ್ (5,804 ಸೋಂಕಿತರು- 319 ಸಾವು) ಮತ್ತು ಮೂರನೇ ಸ್ಥಾನದಲ್ಲಿ ದೆಹಲಿ (4,898 ಸೋಂಕಿತರು, 64 ಸಾವು) ಇದೆ.(ಏಜೆನ್ಸೀಸ್)