ಆರೋಗ್ಯ ಸೇತು ಆ್ಯಪ್​ ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತೆ ಎಚ್ಚರ....!

Arogya sethu
Published on

ನವದೆಹಲಿ: ಕೋವಿಡ್​-19 ಕಾಯಿಲೆಯಿಂದ ದೂರವಿರಲು ಆರೋಗ್ಯ ಸೇತು ಆ್ಯಪ್​ ಬಳಸಿ ಎಂದು ಕೇಂದ್ರ ಸರ್ಕಾರ ಈ ಮೊದಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿತ್ತು. ಬಳಿಕ ಇದನ್ನು ಸರ್ಕಾರಿ ನೌಕರರಿಗೆ ಕಡ್ಡಾಯಗೊಳಿಸಿ ಆದೇಶಿಸಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲಸಕ್ಕೆ ಆರೋಗ್ಯ ತೆರಳಬೇಕೆಂದರೆ ಆರೋಗ್ಯ ಸೇತು ಆ್ಯಪ್​ ಹೊಂದಿರಲೇಬೇಕು. ಅದರಲ್ಲಿ ವಿವರಗಳನ್ನು ದಾಖಲಿಸಿದ ಬಳಿಕ ಅದು ನೀವು ಸುರಕ್ಷಿತವೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಸುರಕ್ಷಿತ ಅಥವಾ ಅಪಾಯ ಕಡಿಮೆ ಎಂದು ತೋರಿಸಿದರಷ್ಟೇ ಕೆಲಸಕ್ಕೆ ತೆರಳಬೇಕು ಎಂದು ಸೂಚಿಸಿತ್ತು.

ವಿಪರ್ಯಾಸವೆಂದರೆ, ಸೋಂಕಿತರು ಕೂಡ ಆರೋಗ್ಯ ಸೇತು ಆ್ಯಪ್ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈವರೆಗೆ ಭಾರತದಲ್ಲಿ ಐದು ಕೋಟಿ ಜನರಷ್ಟೇ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿದ್ದಾರೆ.

ಭಾರತದಲ್ಲಿ 50 ಕೋಟಿಗೂ ಆಧಿಕ ಸ್ಮಾರ್ಟ್​ಫೋನ್​ ಬಳಕೆದಾರರಿದ್ದಾರೆ. ಹೀಗಿದ್ದರೂ, ಕೋವಿಡ್​ ತಡೆಗಾಗಿಯೇ ರೂಪಿಸಲಾಗಿರುವ ಆರೋಗ್ಯ ಸೇತು ಆ್ಯಪ್​ ಬಳಕೆ ಪ್ರಮಾಣ ತೀರಾ ಕಡಿಮೆಯಾಗಿದೆ.

ಇದೀಗ ನೊಯ್ಡಾ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, ಸಾರ್ವಜನಿಕರ ಸ್ಮಾರ್ಟ್​ ಫೋನ್​ನಲ್ಲಿ ಆರೋಗ್ಯ ಸೇತು ಆ್ಯಪ್​ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಒಂದು ಆ್ಯಪ್​ ಇಲ್ಲದಿದ್ದರೆ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ನಿಮ್ಮನ್ನು ಆರು ತಿಂಗಳ ಕಾಲ ಜೈಲಿಗೆ ಕಳುಹಿಸಬಹುದು.

ಕೋವಿಡ್​-19 ಕಾಯಿಲೆ ವ್ಯಾಪಿಸುವುದನ್ನು ತಡೆಗಟ್ಟಲು ಆರೋಗ್ಯ ಸೇತು ಆ್ಯಪ್​ ಹೊಂದಿರಬೇಕಾದುದು ಅಗತ್ಯವಾಗಿದೆ. ನಾಗರಿಕರ ಸ್ಮಾರ್ಟ್​ಫೋನ್​ಗಳಲ್ಲಿ ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ ಎಂದು ನೋಯ್ಡಾ ಡಿಸಿಪಿ ಅಶುತೋಷ್​ ದ್ವಿವೇದಿ ಹೇಳಿದ್ದಾರೆ.

ಉತ್ತರಪ್ರದೇಶ ಸರ್ಕಾರ ಆ್ಯಪ್​ಅನ್ನು ಕಡ್ಡಾಯಯಗೊಳಿಸಿ ಆದೇಶಿಸಿದೆ. ಆದರೆ, ಕರ್ನಾಟಕದಲ್ಲಿನ್ನೂ ಆ ಮಟ್ಟಿಗಿನ ಜಾಗೃತಿ ಮೂಡಿದಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net