More

    ಬಾಬುಜೀ- ಬಾಬು ಸಾಹೇಬ್ ಜಯಂತಿ ಆಚರಣೆ ಕಡ್ಡಾಯ

    ಹಗರಿಬೊಮ್ಮನಹಳ್ಳಿ: ಬಾಬು ಜಗಜೀವನರಾಮ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವನ್ನು ಏ.14ರಂದು ಚಿಂತ್ರಪಳ್ಳಿ ಅಂಬೇಡ್ಕರ್ ಭವನದಲ್ಲಿ ಆಚರಣೆಗೆ ಸಿದ್ದತೆ ನಡೆಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್.ದೊಡ್ಡಬಸಪ್ಪ ತಿಳಿಸಿದರು.

    ಇದನ್ನೂ ಓದಿ: ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ ನಾಳೆ

    ಪಟ್ಟಣದ ತಾಪಂ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ತಾಲೂಕಾಡಳಿತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು.
    ಪ್ರತಿ ವರ್ಷ ನೆಪಮಾತ್ರಕ್ಕೆ ಅಂಬೇಡ್ಕರ್ ಜಯಂತಿಯನ್ನು ಸರ್ಕಾರಿ ವೇದಿಕೆಗೆ ಸೀಮಿತಗೊಳಿಸಿ ಆಚರಿಸಲಾಗುವುದು.

    ಆದರೆ ತಾಲೂಕು ಮಟ್ಟದ ವಿವಿಧ ಇಲಾಖೆ ಕಚೇರಿಗಳಲ್ಲಿ ಕಡ್ಡಾಯವಾಗಿ ಬಾಬುಜೀ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಬೇಕು. ತಾಲೂಕಾಡಳಿತದಿಂದ ಏ.14 ರಂದು ಚಿಂತ್ರಪಳ್ಳಿ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಬೇಕು.

    ದೇಶಕ್ಕೆ ಸಂವಿಧಾನ ನೀಡಿದ ಮಹನೀಯರ ಜಯಂತಿ ಪೂರ್ವಭಾವಿ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದು ನಾಚಿಕೆಗೇಡು. ಸರ್ಕಾರಿ ಅಧಿಕಾರಿಗಳು ಅಂಬೇಡ್ಕರ್‌ರಿಗೆ ಅಗೌರವ ತೋರದೇ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು ಎಂದರು.

    ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನೆಯ ಸಂಚಾಲಕ ಮಾದೂರು ಮಹೇಶ್ವರ ಮಾತನಾಡಿ, ಇತ್ತಿಚೇಗೆ ತಾಲೂಕಿನ ಮುತ್ಕೂರು ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕಾಗಿ ಆಂಜನೇಯ ದೇವಸ್ಥಾನ ಮುಂದೆ ವೇದಿಕೆ ಸಿದ್ದಪಡಿಸಲಾಗಿತ್ತು.

    ಆದರೆ ಕೊನೆಕ್ಷಣದಲ್ಲಿ ವೇದಿಕೆಯನ್ನು ಸ್ಥಳಾಂತರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಅಸ್ಪಶ್ಯತೆ ಜೀವಂತಿಕೆ ಇದೆ ಎಂಬುದು ಸಾಬೀತಾಗಿದೆ. ಇದರ ಬಗ್ಗೆ ತಾಲೂಕಾಡಳಿತ ಕಿಂಚಿತ್ತು ಗಮನಹರಿಸದೇ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

    ತಹಸೀಲ್ದಾರ ಚಂದ್ರಶೇಖರ್ ಶಂಬಣ್ಣ ಗಾಳಿ ಪ್ರತಿಕ್ರಿಯಿಸಿ, ಈ ಬಗ್ಗೆ ಇದುವರೆಗೆ ತಾಲೂಕಾಡಳಿತಕ್ಕೆ ಮಾಹಿತಿ ಇಲ್ಲ. ಲಿಖಿತ ದೂರು ನೀಡಿದರೇ ಸ್ಥಳೀಯ ಪಿಡಿಒರಿಂದ ವರದಿ ಪಡೆದು ಪರಿಶೀಲಿಸಿ ಶಿಸ್ತು ಕ್ರಮಕ್ಕೆ ಮತ್ತು ಜೂನ್ 6ರ ಬಳಿಕ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗುವುದು. ವಿಶ್ವಮಾನವ ಸಂದೇಶದ ಅರಿವು ಸಾಮಾನ್ಯ ಜನರಲ್ಲಿ ಪ್ರಬುದ್ಧತೆ ಹೆಚ್ಚಾದರೇ ಅಸ್ಪಶ್ಯತೆ ಜೀವಂತಿಕೆ ಅಸಾಧ್ಯ ಎಂದರು.

    ದಲಿತ ಮುಖಂಡರಾದ ಹೆಗ್ಡಾಳ್ ರಾಮಣ್ಣ, ಕಹಳೆ ಬಸವರಾಜ, ಉಪನಾಯಕನಹಳ್ಳಿ ಎಚ್.ಪ್ರಭಾಕರ್, ಕೋಗಳಿ ಉಮೇಶ್, ಚಿಮ್ನಳ್ಳಿ ಪೂಜಾರಿ ಸಿದ್ದಪ್ಪ, ಕೆಚ್ಚಿನಬಂಡಿ ದುರುಗಪ್ಪ, ತಾಪಂ ಇಒ ಜಿ.ಪರಮೇಶ್ವರ, ಬಿಇಒ ಮೈಲೇಶ್ ಬೇವೂರು, ಸಮಾಜ ಕಲ್ಯಾಣ ಇಲಾಖೆ ಎಡಿ ಅಂಜನೇಯ ಹುಲ್ಲಾಳ್, ಟಿಎಚ್‌ಓ ಡಾ.ಶಿವರಾಜ್, ಬಿಸಿಯೂಟದ ಅಧಿಕಾರಿ ಎಲ್.ಡಿ.ರವಿನಾಯ್ಕ, ಕೃಷಿ ಇಲಾಖೆ ಎಡಿ ಸುನೀಲ್ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts