More

    ವಚನ ಸಾಹಿತ್ಯದಲ್ಲಿದೆ ಅದ್ಭುತ ಶಕ್ತಿ

    ಹುಲಸೂರು: ಸಾಹಿತ್ಯ ಕ್ಷೇತ್ರಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಿದೆ. ವಚನ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಇದೆ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ. ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಮಂಗಳವಾರ ವೈರಾಗ್ಯ ನಿಧಿ ಅಕ್ಕಮಹಾದೇವಿ ಅವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸ್ವಾಮೀಜಿ, ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ ಎಲ್ಲ ತ್ಯಾಗ ಮಾಡಿ ಬಸವಕಲ್ಯಾಣಕ್ಕೆ ಬಂದು ಸಾವಿರಾರು ವಚನಗಳನ್ನು ಬರೆದಿದ್ದಾರೆ. ಜೀವನ ಸುಧಾರಣೆಗೆ ಅವರು ಬರೆದ ಒಂದೇ ವಚನ ಸಾಕು. ಪ್ರತಿಯೊಬ್ಬರೂ ಬೆಳಗ್ಗೆ ಕನಿಷ್ಠ ಒಂದನಾದರೂ ವಚನ ಓದಿ ತಮ್ಮ ದಿನದ ಕೆಲಸ ಪ್ರಾರಂಭಿಸಬೇಕೆಂದು ಹೇಳಿದರು.

    ಸಾಧು, ಸಂತರ, ಮಹಾತ್ಮರ ಜಯಂತಿ ಆಚರಿಸಿದ್ದರೆ ಸಾಲದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ. ಮಕ್ಕಳಿಗೆ ಒಳ್ಳೆ ಸಂಸ್ಕಾರದ ಜತೆಗೆ ಶಿಕ್ಷಣ ಹಾಗೂ ವಚನದ ಸಾರಾಂಶವನ್ನು ತಿಳಿಸಬೇಕೆಂದು ಕಿವಿಮಾತು ಹೇಳಿದರು.

    ತೊಟ್ಟಿಲಿನಲ್ಲಿ ಅಕ್ಕಮಹಾದೇವಿ ಮೂರ್ತಿ ಇಟ್ಟು ಹಳ್ಳಿ ಸೊಗಡಿನಲ್ಲಿ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಶ್ರೀ ಡಾ.ಶಿವನಂದ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

    ಶ್ರೀ ಶಿವಾನಂದೇಶ್ವರ ಮಹಿಳಾ ಟ್ರಸ್ಟ್​ ಅಧ್ಯಕ್ಷೆ ರೇಖಾ ಕಾಡಾದಿ, ಪ್ರಮುಖರಾದ ಚೆನ್ನಮ್ಮ ಸ್ವಾಮಿ, ಪುಷ್ಪಾವತಿ ನಂದಗೆ, ಶ್ರೀದೇವಿ ಕೋರೆ, ಬೇಬಿವತಿ ಮಂಗಾ, ಪುಷ್ಪಾವತಿ ಪಂಚಾಳ, ಸುನೀತಾ, ಮಹಾನಂದಾ ಹುಡಗೆ, ಪಾರ್ವತಿ ಚಾಂಗಲೂರೆ, ಪವಿತ್ರಾ ಧಬಾಲೆ, ಮಲ್ಲಮ್ಮ ಏಕಲೂರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts