More

    ಶೋಷಿತರ ಪ್ರಗತಿಗೆ ಶಿಕ್ಷಣವೇ ಅಸ್ತ್ರ

    ಜಗಳೂರು: ಅಂಬೇಡ್ಕರ್ ಶಿಕ್ಷಣ ಪಡೆಯದಿದ್ದರೆ ವಿಶ್ವ ಮಾನವ ಎನಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ಶಿಕ್ಷಣ ಕಲಿತು ಸಂವಿಧಾನದ ಆಶಯದಂತೆ ಬದುಕು ರೂಪಿಸಿಕೊಳ್ಳಬೇಕು ಎಂದು ನಾಗಲಿಂಗಪ್ಪ ಹೇಳಿದರು.

    ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದಲ್ಲಿ ಸೋಮವಾರ ದಸಂಸ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 133ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೋಷಿತ ವರ್ಗದ ಸಮಗ್ರ ಪ್ರಗತಿಗೆ ಶಿಕ್ಷಣವೇ ಅಸ್ತ್ರ ಎಂಬ ಸತ್ಯ ಅರಿತುಕೊಳ್ಳಬೇಕು ಎಂದರು.

    ಅಂಬೇಡ್ಕರ್ ಜೀವನದುದ್ದಕ್ಕೂ ಸಾಕಷ್ಟು ತೊಂದರೆ ಅನುಭವಿಸಿದರು. ಶಿಕ್ಷಣ ಪಡೆಯುವಾಗ ಅವಮಾನ ಅನುಭವಿಸಿದರು. ಛಲ ಬಿಡದೆ ಉನ್ನತ ಪದವಿಗಳನ್ನು ಪಡೆದು ಇಡೀ ಭಾರತಕ್ಕೆ ಸಂವಿಧಾನ ಬರೆದ ಪಿತಾಮಹ ಎನಿಸಿಕೊಂಡಿದ್ದಾರೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪಶ್ಯತೆ, ಜಾತೀಯತೆ ಜೀವಂತವಾಗಿದೆ. ಜನರು ಬದಲಾಗಬೇಕು. ನಾವೆಲ್ಲ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನ ಹಕ್ಕು ನೀಡಿದ್ದು ಅಂಬೇಡ್ಕರ್. ಮೂಢನಂಬಿಕೆ ಬಿಟ್ಟು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ನವಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ.ಹೊಳೆ, ದಸಂಸ ಸಂಚಾಲಕ ಮಲೆಮಾಚಿಕೆರೆ ಬಿ.ಸತೀಶ್, ಅಂಗನವಾಡಿ ಕಾರ್ಯಕರ್ತೆ ಗುರುಸಿದ್ದಮ್ಮ ಮಾತನಾಡಿದರು.

    ಮುಖಂಡರಾದ ಪೂಜಾರಿ ಸಿದ್ದಪ್ಪ, ಬಿಳಿಚೋಡು ಹಾಲೇಶ್, ಜಗಜೀವನ್ ರಾಮ್, ಗ್ರಾಪಂ ಸದಸ್ಯ ಪರಮೇಶ್, ಮಾಜಿ ಅಧ್ಯಕ್ಷ ಕಾಟಪ್ಪ, ದಸಂಸ ಪದಾಧಿಕಾರಿಗಳಾದ ಮಹೇಶ್, ಕರಿಬಸಪ್ಪ, ಲಿಂಗಣ್ಣ, ಮಂಜಣ್ಣ, ವಿಜಯ್, ಓಬಳೇಶ್, ನಾಗರಾಜ್, ಚಂದ್ರಪ್ಪ, ಸುರೇಶ್ ಮತ್ತಿತರರಿದ್ದರು.

    ಅಂಬೇಡ್ಕರ್ ಹಾದಿಯಲ್ಲಿ ಸಾಗಿದ ಪ್ರೊ.ಬಿ.ಕೃಷ್ಣಪ್ಪ ದಸಂಸ ಚಳವಳಿ ಮೂಲಕ ಹೊಸ ಕ್ರಾಂತಿಗೆ ಮುನ್ನುಡಿ ಬರೆದರು. ಅನ್ಯಾಯ, ದಬ್ಬಾಳಿಕೆ, ಅಸ್ಪಶ್ಯತೆ ವಿರುದ್ಧ ಹೋರಾಟ ನಡೆಸಿ ನೊಂದ ಜನರಿಗೆ ನ್ಯಾಯ ದೊರಕಿಸಿಕೊಟ್ಟರು. ಆದರೆ, ದಸಂಸ ಹತ್ತಾರು ಭಾಗ ಆಗಿರುವುದು ನೋವಿನ ವಿಷಯ.
    l ಶಂಭುಲಿಂಗಪ್ಪ, ದಲಿತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts