More

    ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ ನಾಳೆ

    ಕೆ.ಆರ್.ನಗರ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಅರ್ಥಪೂರ್ಣ ಹಾಗೂ ಸರಳವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.


    ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಮಹನೀಯರ ಜಯಂತಿಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಥಪೂರ್ಣ ಹಾಗೂ ಸರಳವಾಗಿ ಆಚರಿಸಲಾಗುವುದು ಎಂದು ಬುಧವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನ ರಾಮ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


    ಏ.5ರಂದು ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನ ರಾಮ್ ಜಯಂತಿಯನ್ನು ಪಟ್ಟಣದ ಪುರಸಭೆ ಬಳಿ ಇರುವ ಅವರ ಪ್ರತಿಮೆ ಬಳಿ ಸರ್ಕಾರದ ಸಮಾಜದ ಎಲ್ಲರ ಸಹಕಾರದಿಂದ ಆಚರಣೆ ಮಾಡಲಾಗುವುದು, ಇದಕ್ಕೆ ಸಮುದಾಯದ ಎಲ್ಲ ಮುಖಂಡರು ಸಹಕರಿಸುವಂತೆ ಮನವಿ ಮಾಡಿದರು.


    ಅಂದು ಬೆಳಗ್ಗೆ ತಾಲೂಕು ಆಡಳಿತದಿಂದ ಮಹನೀಯರ ಪುತ್ಥಳಿಗೆ ಪುಷ್ಪಾಲಂಕಾರ ಮಾಡಿಸುವುದಲ್ಲದೆ, ಅಧಿಕಾರಿಗಳು ಹಾಗೂ ಸಮಾಜದ ಮುಖಂಡರೊಂದಿಗೆ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಯಂತಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ, ಅವರ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ ಸಿಹಿ ವಿತರಣೆ ಮಾಡುವ ಮೂಲಕ ರಾಷ್ಟ್ರನಾಯಕರಿಗೆ ಗೌರವ ಸಲ್ಲಿಸಲಾಗುವುದು ಅಂದು ನಿಗದಿತ ಸಮಯಕ್ಕೆ ಸಮುದಾಯದ ಎಲ್ಲ ಮುಖಂಡರು ಮತ್ತು ಆಹ್ವಾನಿತರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಕೋರಿದರು.


    ನಿರ್ದೇಶಕರಿಗೆ ಮುಖಂಡರ ತರಾಟೆ:ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮ ಏ.5ರಂದು ಇರುವಾಗ ಕೇವಲ ಒಂದು ದಿನ ಮುಂಚಿತವಾಗಿ ಪೂರ್ವಭಾವಿ ಸಭೆ ಏರ್ಪಡಿಸಿದ್ದು ಅಲ್ಲದೆ ಮುಖಂಡರಿಗೆ ಸಭೆಯ ಮಾಹಿತಿಯನ್ನು ಸರಿಯಾಗಿ ನೀಡದೆ ಇರುವುದು ರಾಷ್ಟ್ರ ನಾಯಕರಿಗೆ ಮಾಡುವ ಅಗೌರವ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್ ಅವರನ್ನು ಮುಖಂಡರು ತರಾಟೆಗೆ ತೆಗೆದುಕೊಂಡರು.


    ಕೆಲವು ಮುಖಂಡರು ಸಮಾಧಾನಪಡಿಸಿ ಜಗಜೀವನರಾಮ್ ಅವರ ಜಯಂತಿಯನ್ನು ಗೌರವ ಮತ್ತು ಅರ್ಥಪೂರ್ಣವಾಗಿ ಆಚರಿಸಿ ಹಾಗೂ ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಿ ಎಂದು ತಿಳಿಸಿದ ನಂತರ ಸಭೆ ಅಂತಿಮಗೊಂಡಿತು.


    ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಲೋಕೇಶ್, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಚ್.ಕುಮಾರ್, ಸಹ ಕಾರ್ಯದರ್ಶಿ ಕಂಚುಗಾರಕೊಪ್ಪಲು ಸ್ವಾಮಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪರಶುರಾಮ್, ಭೂ ನ್ಯಾಯ ಮಂಡಳಿ ಮಾಜಿ ನಿರ್ದೇಶಕ ಸಿದ್ದಾಪುರ ರಮೇಶ್, ಮುಖಂಡರಾದ ಮಾರಗೌಡನಹಳ್ಳಿ ರಾಜೇಶ್, ರವಿಪೂಜಾರಿ, ವಜ್ರೇಶ ಟಿಎಸ್‌ಡಬ್ಲುೃಎಸ್ ಎಂ.ಅಶೋಕ್‌ಕುಮಾರ್, ಉಪ ತಹಸೀಲ್ದಾರ್ ಅಸ್ಲಾಂ ಪಾಷ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts