ಚಾಮರಾಜನಗರಕ್ಕೆ ಆತಂಕ ತಂದಿಟ್ಟ ಬೆಂಗಳೂರಿನ ಕರೊನಾ ಸೋಂಕಿತ ಪೇದೆ...!

corona1
Published on

ಹನೂರು: ನಿನ್ನೆ ಬೆಂಗಳೂರು ನಗರದ ಪೊಲೀಸ್ ಪೇದೆಯೋರ್ವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಈ ಪೇದೆಯಿಂದಾಗಿ ಈಗ ಚಾಮರಾಜನಗರದಲ್ಲಿ ಆತಂಕ ಶುರುವಾಗಿದೆ.

ಪೇದೆಯನ್ನು ತಪಾಸಣೆಗೆ ಒಳಪಡಿಸಿದಾಗ ಮೊದಲ ವರದಿಯಲ್ಲಿ ನೆಗೆಟಿವ್​ ಬಂದಿತ್ತು. ಎರಡನೇ ವರದಿಯಲ್ಲಿ ಕರೊನಾ ಪಾಸಿಟಿವ್​ ಬಂದಿದೆ. ಆದರೆ ಈ ಮೊದಲ ವರದಿಯ ನಂತರ ಎರಡನೇ ರಿಪೋರ್ಟ್ ಬರುವ ಮಧ್ಯದ ಅವಧಿಯಲ್ಲಿ ಪೇದೆ ಚಾಮರಾಜನಗರದ ಬೆಳ್ತೂರು ಗ್ರಾಮದಲ್ಲಿರುವ ಸಂಬಂಧಿಯೋರ್ವರ ಮನೆಗೆ ಭೇಟಿ ಕೊಟ್ಟಿದ್ದರು.

ಪೇದೆಯಲ್ಲಿ ಸೋಂಕು ಕಾಣಿಸುತ್ತಿದ್ದಂತೆ ಅವರ ಟ್ರಾವೆಲ್​ ಹಿಸ್ಟರಿಯನ್ನು ಕೇಳಲಾಗಿತ್ತು. ಸದ್ಯ ಬೆಳ್ತೂರು ಗ್ರಾಮದಲ್ಲಿ ಪೇದೆಯ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾದ 15-20ಜನರನ್ನು ಗುರುತಿಸಿ, ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಡಿಸಿ, ಎಸ್​ಪಿ ಸ್ಪಷ್ಟ ಉತ್ತರ ನೀಡಿಲ್ಲ. ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಎಚ್​ಒ ಡಾ. ರವಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net