

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಇವತ್ತು ಒಂದೇ ದಿನದಲ್ಲಿ ಹತ್ತು ಸಾವಿರದ ಗಡಿಯನ್ನು ದಾಟಿರುವ ಪ್ರಕರಣದ ಸಂಖ್ಯೆ 12 ಸಾವಿರಕ್ಕೆ ತಲುಪಿದೆ. ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಸಂಖ್ಯೆ ಅರ್ಧ ಲಕ್ಷಕ್ಕೆ ಸಮೀಪಿಸಿದೆ.
ರಾಜ್ಯದಲ್ಲಿ ಇಂದು 12 ಸಾವಿರ ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ರೇಟ್ ಶೇ. 6.33ಕ್ಕೆ ತಲುಪಿದೆ. 12 ಸಾವಿರ ಪ್ರಕರಣಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 9,020 ಪ್ರಕರಣಗಳು ದಾಖಲಾಗಿವೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ 40ಕ್ಕೆ ಏರಿದ್ದರೆ, ರಾಜ್ಯದಲ್ಲಿ 49,602ಕ್ಕೆ ತಲುಪಿದೆ.
ನಿನ್ನೆ ರಾಜ್ಯದಲ್ಲಿ 8,906 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಆ ಪೈಕಿ ಬೆಂಗಳೂರಿನಲ್ಲೇ 7,113 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಮೊನ್ನೆಯವರೆಗೂ ಶೇ. 4.15 ಇದ್ದ ಪಾಸಿಟಿವಿಟಿ ರೇಟ್ ನಿನ್ನೆ ಶೇ. 5.42 ಆಗಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ಅದು ದುಪ್ಪಟ್ಟಾಗಿದ್ದು, ಪಾಸಿಟಿವಿಟಿ ರೇಟ್ ಶೇ. 10ಕ್ಕೆ ತಲುಪಿತ್ತು.