ಸಾರಾಸಗಟಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೇ ವಿರೋಧಿಸಿ, ಡಂಗುರ ಸಾರಿದ ಪ್ರಶಾಂತ್ ಸಂಬರಗಿ!

Sambargi
Published on

ಬೆಂಗಳೂರು: ಇತ್ತೀಚೆಗಷ್ಟೇ ಮೈಮೇಲೆ 'ಬಂಡೆ' ಎಳೆದುಕೊಂಡು ವಿವಾದಕ್ಕೆ ಈಡಾಗಿದ್ದಲ್ಲದೆ, ಆ ಸಂಬಂಧಿತ ದೂರನ್ನೂ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆ ಮೂಲಕ ಚಿತ್ರರಂಗದ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಾಂಗ್ರೆಸ್​ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka film chamber of commerce) ಬೆಂಬಲ ಸೂಚಿಸಿದ್ದರ ವಿರುದ್ಧ ಅವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಬೆಂಬಲವನ್ನು ವಿರೋಧಿಸಿ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಕೇಳ್ರಪ್ಪೋ ಕೇಳಿ.. KFCC... ಕರ್ನಾಟಕ ಫಿಲ್ಮ್​ ಚೇಂಬರ್ ಆಫ್ ಕಾಮರ್ಸ್​ಗೆ ಮರು ನಾಮಕರಣ ಮಾಡಲಾಗಿದೆ. ಈಗ ಅದನ್ನು ಕರ್ನಾಟಕ ಫಿಲ್ಮ್​ ಚೇಂಬರ್ ಆಫ್​ ಕಾಂಗ್ರೆಸ್ ಎಂದು ಕರೆಯಲಾಗುವುದು. ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ರಾಜಕೀಯಕ್ಕೆ ಒಳಗಾಗಿರುವುದು ನಾಚಿಕೆಗೇಡು, ಸ್ವಾರ್ಥಕ್ಕಾಗಿ ಸಾರಾ ಗೋವಿಂದು ವಾಣಿಜ್ಯ ಮಂಡಳಿಯನ್ನು ಬಳಸಿ ಸರ್ಕಾರದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ' ಎಂಬುದಾಗಿ ಸಾರಾ ಗೋವಿಂದು ಮಾತ್ರವಲ್ಲದೆ ಸಾರಾಸಗಟಾಗಿ ವಾಣಿಜ್ಯ ಮಂಡಳಿ ವಿರುದ್ಧವೇ ಸಂಬರಗಿ ತಿರುಗಿಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net