

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ರೌದ್ರಾವತಾರ ಭೀಕರವಾಗಿ ಗೋಚರಿಸುತ್ತಿದೆ. ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ!
ಇಂದು ಸಂಜೆ 5 ಗಂಟೆಯವರೆಗಿನ ಲೆಕ್ಕಾಚಾರವನ್ನು ತೆಗೆದುಕೊಳ್ಳುವುದಾದರೆ ಒಟ್ಟು 10,118 ಮಂದಿಗೆ ಕರೊನಾ ಸೋಂಕು ಬಾಧಿಸಿದೆ. ಆದರೆ ಈ ಪೈಕಿ 6151 ಮಂದಿ ಇದಾಗಲೇ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಸಕ್ರೀಯ ಪ್ರಕರಗಳು 3799.
ಕಳೆದ 24 ಗಂಟೆಗಳಲ್ಲಿ 397 ಹೊಸ ಕೇಸ್‌ಗಳು ಪತ್ತೆಯಾಗಿದೆ. ಕರೊನಾ 14 ಮಂದಿಯನ್ನು ಬಲಿ ಪಡೆದಿದ್ದು, ಕರ್ನಾಟಕದಲ್ಲಿ ಮೃತರ ಸಂಖ್ಯೆ 164ಕ್ಕೆ ಏರಿದೆ.
ಹೊಸ ಸೋಂಕಿತರ ಸಂಖ್ಯೆ ಜಿಲ್ಲಾವಾರು ಈ ರೀತಿ ಇದೆ:
ಬೆಂಗಳೂರು 173; ಬಳ್ಳಾರಿ 34; ಕಲಬುರಗಿ 22; ರಾಮನಗರ 22; ಉಡುಪಿ 14; ಯಾದಗಿರಿ 13; ದಕ್ಷಿಣ ಕನ್ನಡ 12; ಧಾರವಾಡ 12; ಕೊಪ್ಪಳ 11; ರಾಯಚೂರು 9; ಉತ್ತರ ಕನ್ನಡ 9; ದಾವಣಗೆರೆ 8; ಚಿಕ್ಕಬಳ್ಳಾಪುರ 8; ಮೈಸೈರಯ 7; ಬೆಂಗಳೂರು ಗ್ರಾಮಾಂತರ 7; ಗದಗ 6; ಕೋಲಾರ 6; ಬೀದರ್ 5; ವಿಜಪುರ 4; ಶಿವಮೊಗ್ಗ 3; ಮಂಡ್ಯ 2; ಚಿತ್ರದುರ್ಗ 2; ಕೊಡಗು 2; ಬೆಳಗಾವಿ1; ಹಾಸನ 1; ತುಮಕೂರು 1; ಚಿಕ್ಕಮಗಳೂರು 1.
ಮೃತಪಟ್ಟವರ ವಿವರ: ಬೆಂಗಳೂರು ನಗರ 5; ಬಳ್ಳಾರಿ 4; ಕಲಬುರಗಿ 2; ತುಮಕೂರು 1; ರಾಮನಗರ 2.