More

    ಗರ್ಭಿಣಿಗೆ ಕರೊನಾ ಇಲ್ಲದಿದ್ದರೂ ಇದೆ ಅಂದ್ರು… 6 ದಿನದ ಹಸುಗೂಸನ್ನೇ ಬಲಿ ಪಡೆದ್ರು!

    ದಾವಣಗೆರೆ: ಕರೊನಾ ಪರೀಕ್ಷೆ ವೇಳೆ ಖಾಸಗಿ ಲ್ಯಾಬ್​ ಮಾಡಿದ ಎಡವಟ್ಟಿನಿಂದಾಗಿ ತಾಯಿಯಿಂದ ದೂರವಿದ್ದ 6 ದಿನದ ಹಸುಗೂಸು ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

    ತಾಲೂಕಿನ ದೊಡ್ಡಬಾತಿ ದುರ್ಗಾಂಬಿಕಾ ಕ್ಯಾಂಪ್‌ನ ಗರ್ಭಿಣಿಯೊಬ್ಬರಿಗೆ ಖಾಸಗಿ ಪ್ರಯೋಗಾಲಯದಲ್ಲಿ ಗಂಟಲು ದ್ರವದ ಮಾದರಿಯ ಪರೀಕ್ಷೆ ನಡೆಸಿದಾಗ ಕರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಇರುವಾಗಲೇ ಜೂನ್ 18ರಂದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ನಡುವೆ ಮತ್ತೊಂದು ಖಾಸಗಿ ಲ್ಯಾಬ್‌ನಲ್ಲಿ ಕರೊನಾ ಪರೀಕ್ಷೆ ನಡೆಸಿದಾಗ ಅವರ ವರದಿ ನೆಗೆಟಿವ್ ಬಂದಿತ್ತು. ಇದನ್ನೂ ಓದಿರಿ ಪಿಪಿಇ ಕಿಟ್​ ಧರಿಸದೆ ಕೋವಿಡ್​ ಸೋಂಕಿತನ ಅಂತ್ಯಸಂಸ್ಕಾರ ನೆರವೇರಿಸಿದ ಶಾಸಕ!

    ಮೂರನೇ ಅಭಿಪ್ರಾಯ ಪಡೆಯಲು ಮಾದರಿಯನ್ನು ಬೆಂಗಳೂರಿನ ಎನ್‌ಐವಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಲ್ಲಿಯೂ ಕರೊನಾ ವರದಿ ನೆಗೆಟಿವ್ ಬಂದಿದ್ದರಿಂದ ಮಹಿಳೆಯನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೆ ಘೋಷಣೆ ಮಾಡಲಾಯಿತು.

    ಆದರೆ, ಹಸುಗೂಸುವಿನ ಆರೋಗ್ಯ ಸರಿ ಇರಲಿಲ್ಲ. ಆಸ್ಪತ್ರೆಯ ನವಜಾತ ಶಿಶು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಮಂಗಳವಾರ ಬೆಳಗ್ಗೆ ಮೃತಪಟ್ಟಿತ್ತು. ತಾಯಿಗೆ ಕರೊನಾ ಇದೆ ಎಂಬ ಕಾರಣಕ್ಕೆ ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಲಾಯಿತು. ಅದರಿಂದಾಗಿಯೇ ಮಗು ಮೃತಪಟ್ಟಿದೆ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

    ಇದನ್ನೂ ಓದಿರಿ ಕರೊನಾದಿಂದ ಪಾರಾಗಲು ‘ಮದ್ದು’ ಕೊಟ್ಟಿದ್ದಾರೆ ಎಚ್​ಡಿಕೆ, ಸಮಸ್ಯೆಗೆ ಇದೊಂದೇ ಪರಿಹಾರ!

    ತಾಯಿಗೆ ಮಗುವಿನ ಮುಖವನ್ನೂ ತೋರಿಸಿಲ್ಲ. ಕರೊನಾ ಇದೆ ಅಂತ ಐಸಿಯು ನಲ್ಲಿ ಇಟ್ಟಿದ್ದರು. ಮಗುವಿನ ಕರುಳ ಬಳ್ಳಿ ಕತ್ತರಿಸುವಾಗ ಸೋಂಕಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಮಗು ಸತ್ತಿದೆ. ನಮಗೆ ನ್ಯಾಯ ಬೇಕು. ನಿನ್ನೆಯೇ ಮಗು ಮೃತಪಟ್ಟಿದ್ದರೂ ನಮಗೆ ಇಂದು ಮೃತದೇಹ ಕೊಟ್ಟಿದ್ದಾರೆ ಎಂದು ಮೃತ ಮಗುವಿನ ತಂದೆ ಅಳಲು ತೋಡಿಕೊಂಡಿದ್ದಾರೆ.

    ಕರೊನಾ ಸೃಷ್ಟಿಸಿರುವ ಭೀತಿ ಏನೆಂಬುದು ನಮಗೂ ಗೊತ್ತಿದೆ. ಆದರೆ, ನಮಗೂ ಮಗು ಮುಖ ನೋಡಲು ಆಗದಂಥ ಪರಿಸ್ಥಿತಿ ತಂದ ಖಾಸಗಿ ಲ್ಯಾಬ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಕೋರ್ಟ್​ ಸಿಬ್ಬಂದಿಗೆ ಕರೊನಾ ಪಾಸಿಟಿವ್​, ನ್ಯಾಯಾಧೀಶರಿಗೂ ಟೆನ್ಷನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts