

ಚಿಕ್ಕಬಳ್ಳಾಪುರ: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ಸಚಿವರ ಮನೆಗೂ ವಕ್ಕರಿಸಿದ ಮಹಾಮಾರಿ ಕರೊನಾ ಸೋಂಕು ಈಗ ನ್ಯಾಯಾಲಯಕ್ಕೂ ಕಾಲಿಟ್ಟಿದೆ.
ಕರೊನಾ ವಾರಿಯರ್ಗಳಾದ ಪೊಲೀಸರು, ವೈದ್ಯರನ್ನೂ ಬೆಂಬಿಡದೆ ಕಾಡುತ್ತಿರುವ ಸೋಂಕು ಈಗ ಬಾಗೇಪಲ್ಲಿ ಜೆಎಂಎಫ್ಸಿ ಕೊರ್ಟ್ ಸಿಬ್ಬಂದಿಗೂ ವಕ್ಕರಿಸಿದೆ. ನ್ಯಾಯಾಲಯವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಇದನ್ನೂ ಓದಿರಿ ಎಚ್ಚರ! ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್, ನಿಮ್ಮ ಬಳಿಯೂ ಆತ ಬರಬಹುದು…
ಬಾಗೇಪಲ್ಲಿ ನ್ಯಾಯಾಲಯದ ಮಹಿಳಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಗೌರಿಬಿದನೂರು ಮೂಲದ ಈ ಮಹಿಳೆಯು ಕೆಲಸಕ್ಕೆಂದು ಪ್ರತಿನಿತ್ಯ ಬಾಗೇಪಲ್ಲಿಗೆ ಪ್ರಯಾಣಿಸುತ್ತಿದ್ದರು. ಇತ್ತೀಚೆಗೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಫೀವರ್ ಕ್ಲಿನಿಕ್ನಲ್ಲಿ ಮಹಿಳೆಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಕರೊನಾ ಪರೀಕ್ಷೆ ಮಾಡಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ನ್ಯಾಯಾಧೀಶರು ಸೇರಿ ಕೋರ್ಟಿನ ಸಿಬ್ಬಂದಿಗೆ ಕರೊನಾ ಭೀತಿ ಆವರಿಸಿದೆ.