More

    ಪಿಪಿಇ ಕಿಟ್​ ಧರಿಸದೆ ಕೋವಿಡ್​ ಸೋಂಕಿತನ ಅಂತ್ಯಸಂಸ್ಕಾರ ನೆರವೇರಿಸಿದ ಶಾಸಕ!

    ಮಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟವನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಶಾಸಕ ಯು.ಟಿ. ಖಾದರ್ ಪಿಪಿಇ ಕಿಟ್ ಧರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

    ಕರೊನಾ ಸೋಂಕಿನಿಂದ ಬಳಲುತ್ತಿದ್ದ 70 ವರ್ಷದ ವದ್ಧರೊಬ್ಬರು ನಿನ್ನೆ(ಮಂಗಳವಾರ) ಮೃತಪಟ್ಟಿದ್ದರು. ಅಂದು ಸಂಜೆ ಮಂಗಳೂರಿನ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಬಂದಿದ್ದರು. ಈ ವೇಳೆ ಪಿಪಿಇ ಕಿಟ್ ಧರಿಸದೆ ಅಲ್ಲಿಗೆ ಬಂದ ಖಾದರ್, ಸ್ವತಃ ಮಸೀದಿ ಭೂಮಿಯಲ್ಲಿ ಗುಂಡಿ ತೆಗೆಯುವ ಕಾರ್ಯದಲ್ಲಿ ಭಾಗಿಯಾದರು. ಇದನ್ನೂ ಓದಿರಿ ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

    ಕರೊನಾ ಸೋಂಕಿತನ ಅಂತ್ಯಸಂಸ್ಕಾರ ಕಾರ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ಪಾಲ್ಗೊಂಡ ಶಾಸಕ ಖಾದರ್, ಮೃತದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸವನ್ನೂ ಮಾಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರು. ಆದರೆ, ಶಾಸಕರು ಮಾತ್ರ ಇದ್ಯಾವುದರ ಪರಿವೇ ಇಲ್ಲದಂತೆ ವರ್ತಿಸಿದ್ದು ಮತ್ತಷ್ಟು ಆತಂಕ ಮೂಡಿಸಿದೆ.

    ಇದನ್ನೂ ನೋಡಿ

    ಕರೊನಾ ಸೋಂಕಿತನ ಅಂತ್ಯಸಂಸ್ಕಾರ ನಡೆಸಿದ ಯು.ಟಿ. ಖಾದರ್

    ಕೋವಿಡ್ ಸೋಂಕಿತನ ಮೃತದೇಹದ ಅಂತ್ಯಸಂಸ್ಕಾರ ನಡೆಸಿದ ಶಾಸಕ ಯು.ಟಿ. ಖಾದರ್. ಮಂಗಳೂರಿನ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಶಾಸಕ ಖಾದರ್ ರಿಂದ ಅಂತ್ಯಸಂಸ್ಕಾರ ನಡೆಸಿದ್ದಾರೆ. ಖಾದರ್ ಅವರು ಮೃತದೇಹ ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸ ಮಾಡಿದ್ದಾರೆ. ಆದರೆ ಅವರು ಪಿಪಿಇ ಕಿಟ್ ಧರಿಸದೇ ಅಂತ್ಯ ಸಂಸ್ಕಾರ ಕಾರ್ಯ ನಡೆಸಿದ್ದಾರೆ. ನಿಮ್ಮ ಊರಿನ ಸುದ್ದಿಗಳನ್ನೂ ವರದಿ ಮಾಡಬೇಕೆ? ಡೌನ್’ಲೋಡ್ ಮಾಡಿಕೊಳ್ಳಿ ಪವರ್ ನ್ಯೂಸ್ https://pwnz.co/wX6yzJghz7ಸುದ್ದಿ: ಅಶೋಕ್, ಮಂಗಳೂರು

    Posted by Vijayavani on Tuesday, June 23, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts