ಸಂವಿಧಾನ ಓದು ಪುಸ್ತಕ ವಿತರಣಾ ಸಮಾರಂಭದಲ್ಲಿ ಕಣ್ಣೀರು ಹಾಕಿದ ಸಂಸದ ಶ್ರೀನಿವಾಸಪ್ರಸಾದ್

srinivas prasad
Published on

ಚಾಮರಾಜನಗರ: 'ಸಂವಿಧಾನ ಓದು' ಪುಸ್ತಕ ವಿತರಣಾ ಸಮಾರಂಭದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಕಣ್ಣೀರು ಹಾಕಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾಯಕ್ರಮದಲ್ಲಿ ವಿ.ಶ್ರೀನಿವಾಸ ಪ್ರಸಾದ್​ರ ಸಂಸದರ ನಿಧಿ ಬಳಸಿ ಚಾಮರಾಜನಗರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 30 ಸಾವಿರ ಪಿಯು ವಿದ್ಯಾರ್ಥಿಗಳಿಗೆ ನ್ಯಾ. ನಾಗಮೋಹನದಾಸ್ ರಚಿಸಿರುವ 'ಸಂವಿಧಾನ ಓದು' ಪುಸ್ತಕವನ್ನ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿತರಿಸಿದರು. ಇದನ್ನೂ ಓದಿರಿ ಜಾರಕಿಹೊಳಿ ಸಿಡಿ ಕೇಸ್: ಆ ಐವರ ಬಗ್ಗೆ ದಿನೇಶ್​ ಕಲ್ಲಹಳ್ಳಿ ಹೇಳಿದ್ದೇನು?

ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಸಾಹಿತಿ ಡಾ.ಸಿದ್ದಲಿಂಗಯ್ಯ ಅವರು ಬರೆದಿರುವ 'ನಾಡನಡುವಿನಿಂದ ಸಿಡಿದ ನೋವಿನ ಕೂಗೆ, ಆಕಾಶದಗಲಕ್ಕೆ ನಿಂತ ಆಲವೇ...' ಗೀತೆಯನ್ನ ಪುಸ್ತಕ ವಿತರಣೆ ಸಮಾರಂಭದಲ್ಲಿ ಗಾಯಕ ಸಿಎಂ ನರಸಿಂಹಮೂರ್ತಿ ಹಾಡುತ್ತಿದ್ದರು. ಈ ವೇಳೆ ಹಾಡು ಕೇಳುತ್ತ ಸಂಸದರು ಗದ್ಗದಿತರಾದರು.

ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದ ಸರ್ವೋತ್ಕೃಷ್ಟ ಗ್ರಂಥ. ಚಹಾ ಮಾಡುತ್ತಿದ್ದ ನಾನು ಪ್ರಧಾನಿ ಆಗಲು ಸಂವಿಧಾನ ಕಾರಣ ಎಂದು ಮೋದಿ ಹೇಳಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಸಂಸ್ಥೆ ನಮ್ಮ ಪಾರ್ಲಿಮೆಂಟ್ ಎಂದು ಸಂಸದ ಶ್ರೀನಿವಾಸ ಪ್ರಸಾದ್ ಹೇಳಿದರು.

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿನ ಎಸ್.ಟಿ.ಸೋಮಶೇಖರ್, ಶಾಸಕರಾದ ಸಿ‌.ಪುಟ್ಟರಂಗಶೆಟ್ಟಿ, ನರೇಂದ್ರ, ಎನ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net