ಸಂವಿಧಾನ, ಕುರಾನ್ ತತ್ವ ಪಾಲಿಸಿ

jyp bakrid
ಜಯಪುರದಲ್ಲಿ ಬಕ್ರೀದ್ ಸಲುವಾಗಿ ಮುಸ್ಲಿಮರು ಖಬರಸ್ತಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Published on

ಜಯಪುರ: ಭಾರತೀಯ ಮುಸಲ್ಮಾನರಾದ ನಾವು ಒಂದು ಕೈಯಲ್ಲಿ ಭಾರತದ ಸಂವಿಧಾನ, ಮತ್ತೊಂದು ಕೈಯಲ್ಲಿ ಪರಿಶುದ್ಧ ಕುರಾನ್ ಹಿಡಿದು ಎರಡನ್ನು ಚಾಚೂ ತಪ್ಪದೆ ಪಾಲಿಸಿ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯ ಧರ್ಮ ಗುರು ಹಸನ್ ಸಖಾಫಿ ಅಲ್-ಹಿಕಮಿ ಬೆಜ್ಜವಳ್ಳಿ ಹೇಳಿದರು.
ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸೋಮವಾರ ನಡೆದ ಬಕ್ರೀದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಕ್ರಿದ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಜಗತ್ತಿನ ಮೂಲೆ ಮೂಲೆಗಳಲ್ಲಿ ಪ್ರಾರ್ಥನೆ ನಡೆಸುತ್ತೇವೆ. ಎಲ್ಲರಿಗೂ ಒಳಿತಾಗಲಿ ಎನ್ನುವುದು ಈ ಪ್ರಾರ್ಥನೆಯ ಉದ್ದೇಶ. ಈ ಹಬ್ಬ ತ್ಯಾಗ, ಸಹನೆ, ತಾಳ್ಮೆಯ ಪ್ರತೀಕ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವ ಮೂಲಕ ಪ್ರವಾದಿಗಳ ತತ್ವವನ್ನು ಪಾಲಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net