ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣವಲ್ಲವೇ?; ರಾಜ್ಯ ಕಾಂಗ್ರೆಸ್​ ಟೀಕೆ

Congresss tweet
Published on

ಬೆಂಗಳೂರು: "ಟೊಮ್ಯಾಟೊ ಗುಜರಾತಿನಲ್ಲಿ ಕರ್ನಾಟಕಕ್ಕಿಂತ ದುಬಾರಿ ಇದೆ. ಅಕ್ಕಿ, ಬೇಳೆ, ಕಾಳುಗಳ ಬೆಲೆ ಇಡೀ ದೇಶದಲ್ಲೇ ಏರಿಕೆ ಕಾಣುತ್ತಿದೆ. ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣವಲ್ಲವೇ?, ಕೇಂದ್ರ ಸರ್ಕಾರ ಜಿಎಸ್​​ಟಿ ಕಡಿತಗೊಳಿಸಿ ಜನಸಾಮಾನ್ಯರ ಹೊರೆ ಇಳಿಸಬೇಕಲ್ಲವೇ? ಬಿಜೆಪಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ, ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಲಿ" ಎಂದು ಟ್ವೀಟ್​ ಮಾಡಿದೆ.

"ದಿನಬಳಕೆಯ ವಸ್ತುಗಳ ಮೇಲೆ ಹಾಕಿರುವ ದುಬಾರಿ ಜಿಎಸ್​​ಟಿ ವಿರುದ್ಧ ಬಿಜೆಪಿ ನಾಯಕರು ಹೋರಾಟ ರೂಪಿಸಲಿ, ಕಾಂಗ್ರೆಸ್ ಪಕ್ಷವೂ ಬಿಜೆಪಿಯ ಹೋರಾಟಕ್ಕೆ ಬೆಂಬಲಿಸಲಿದೆ. ಬಿಜೆಪಿಗರು ರಾಜಕೀಯ ಬಿಟ್ಟು ನೈಜ ಜನಪರ ಕಾಳಜಿಯನ್ನು ಮೈಗೂಡಿಸಿಕೊಳ್ಳಲಿ" ಎಂದು ಟ್ವೀಟ್​ ಮೂಲಕ ಬಿಜೆಪಿಯನ್ನು ಟೀಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net