More

    17ರ ಬಾಲಕಿ, ಶಿಕ್ಷಕಿ ನಾಪತ್ತೆ: ಕುಟುಂಬದವರಿಂದ ಮತಾಂತರ ಆರೋಪ

    ಬಿಕಾನೇರ್‌: ಅಪ್ರಾಪ್ತ ವಯಸ್ಕಳನ್ನು ಇಸ್ಲಾಂಗೆ ಮತಾಂತರಿಸುವ ಉದ್ದೇಶದಿಂದ ಶಿಕ್ಷಕಿಯೊಬ್ಬಳು ಅಪಹರಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ ಘಟನೆ ರಾಜಸ್ತಾನದ ಬಿಕಾನೇರ್​ನಲ್ಲಿ ನಡೆದಿದೆ.

    ಯುವತಿಯನ್ನು ನಿದಾ ಬಹ್ಲೀಮ್​ ಎಂದು ಗುರುತಿಸಲಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17 ವರ್ಷದ ಬಾಲಕಿ ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಇವರಿಬ್ಬರೂ ನಾಪತ್ತೆಯಾಗಿದ್ದು ಒಂದೆಡೆ ಬಾಲಕಿಯ ಪೋಷಕರು ಮತಾಂತರದ ಪ್ರಕರಣ ದಾಖಲಿಸಿದರೆ , ಇನ್ನೊಂದೆಡೆ ಶಿಕ್ಷಕಿಯ ಮನೆಯವರು ನಾಪತ್ತೆಯಾಗಿರುವ ದೂರು ನೀಡಿದ್ದಾರೆ.

    ಇದನ್ನೂ ಓದಿ: ಪತ್ನಿ ಕೆಲಸದಲ್ಲಿದ್ದಾಗ ಮಹಿಳೆಯರಿಗಾಗಿ ಹುಡುಕಾಟ: ಇಂಗ್ಲೆಂಡಲ್ಲಿ ಹೆಂಡತಿ, ಮಕ್ಕಳನ್ನು ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

    ಜೂನ್ 30ರಂದು 12ನೇ ತರಗತಿಯ ವಿದ್ಯಾರ್ಥಿನಿ ನಾಪತ್ತೆಯಾದ ನಂತರ ಆಕೆಯ ಪೋಷಕರು ಆಕೆಯ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಿದ್ದಾರೆ. ಮೂರು ದಿನಗಳ ನಂತರವೂ ಆಕೆ ಪತ್ತೆಯಾಗದಿದ್ದಾಗ, ಬಾಲಕಿಯ ಕುಟುಂಬಸ್ಥರು ಜುಲೈ 3ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

    ಬಾಲಕಿಯ ಕುಟುಂಬದವರು ತಮ್ಮ ದೂರಿನಲ್ಲಿ, ಜೂನ್ 30ರಂದು ಬಾಲಕಿ ಶಾಲೆಗೆ ಹಾಜರಾಗಲು ತನ್ನ ಮನೆಯಿಂದ ಹೋಗಿದ್ದಳು. ಆದರೆ ಅವಳು ಶಾಲೆಗೂ ಹೋಗಿಲ್ಲ, ಮನೆಗೂ ವಾಪಾಸ್ಸು ಬಂದಿಲ್ಲ. ಜೈಪುರ ರೈಲು ನಿಲ್ದಾಣದಲ್ಲಿ ಬಾಲಕಿಯನ್ನು ನೋಡಿದ್ದಾಗಿ ಕೆಲವರು ಹೇಳಿದ್ದಾರೆ. ಸದ್ಯ, ಅವರು ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ. ಕಳೆದ ಎರಡು ತಿಂಗಳಿನಿಂದ ಶಿಕ್ಷಕಿಯು ಬಾಲಕಿಯ ಜತೆಗೆ ಹತ್ತಿರ ಬರಲು ಯತ್ನಿಸುತ್ತಿದ್ದಳು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ; ಭಾರತದ ಮೇಲೆ ಏನು ಪರಿಣಾಮ?

    ಇನ್ನು,  ಈ ಕುರಿತು ಕೆಲವು ಸಂಘಟನೆ ಪ್ರತಿಭಟನೆ ನಡೆಸಿ ಇದು ಲವ್​ ಜಿಹಾದ್​ ಎಂದು ಆರೋಪಿಸಿ ಪ್ರತಿಭಟನೆ ನಡೆಸಿವೆ. ಇನ್ನೊಂದೆಡೆ ವಿದ್ಯಾರ್ಥಿನಿ ಮತ್ತು ಆಕೆಯ ಶಿಕ್ಷಕರ ಪತ್ತೆಗೆ ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts