More

    ಪತ್ನಿ ಕೆಲಸದಲ್ಲಿದ್ದಾಗ ಮಹಿಳೆಯರಿಗಾಗಿ ಹುಡುಕಾಟ: ಇಂಗ್ಲೆಂಡಲ್ಲಿ ಹೆಂಡತಿ, ಮಕ್ಕಳನ್ನು ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

    ಲಂಡನ್​: ಬ್ರಿಟನ್​ನಲ್ಲಿ ಪತ್ನಿ ಮತ್ತು ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದ ಮಲಯಾಳಂ ಮೂಲದ ವ್ಯಕ್ತಿಗೆ ಲಂಡನ್​ ಕೋರ್ಟ್​ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

    ಕೇರಳದ ಕಣ್ಣೂರಿನ ಪಡಿಯೂರು ಮೂಲದ ಚೆಲೆವೆಲಾನ್​ ಸಾಜು (52) ಎಂಬಾತನಿಗೆ ಬ್ರಿಟನ್​ನ ಪೆಥರ್ಟನ್​ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

    ಈ ಘಟನೆ 2022ರ ಡಿಸೆಂಬರ್​ 15ರಂದು ಇಂಗ್ಲೆಂಡ್​ನ ನಾರ್ಥಾಂಪ್ಟನ್‌ಶೈರ್ ಕೌಂಟಿಯ ಕೆಟ್ಟೆರಿಂಗ್​ ಪಟ್ಟಣದಲ್ಲಿ ನಡೆದಿತ್ತು. ಆರೋಪಿ ಸಾಜು, ಕೊಟ್ಟಾಯಂನ ವೈಕೋಮ್ ಮೂಲದ ಪತ್ನಿ ಅಂಜು (40) ಮತ್ತು ಇಬ್ಬರು ಮಕ್ಕಳಾದ ಜಾನ್ವಿ (4) ಮತ್ತು ಜೀವಾ (6) ರನ್ನು ಹತ್ಯೆ ಮಾಡಿದ್ದ.

    ಮೂವರನ್ನು ಕೊಂದಿರುವುದಾಗಿ ಕಳೆದ ಏಪ್ರಿಲ್‌ನಲ್ಲಿ ಸಾಜು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದ. ಅಂಜುಗೆ ವಿವಾಹೇತರ ಸಂಬಂಧವಿದೆ ಎಂಬ ಶಂಕೆಯಿಂದ ಕುಡಿತದ ಅಮಲಿನಲ್ಲಿ ಅಂಜು ಅವರನ್ನು ಕೊಂದಿರುವುದಾಗಿ ಸಾಜು ಹೇಳಿಕೆ ನೀಡಿದ್ದ. ಅಂಜುಗೆ ವಿವಾಹೇತರ ಸಂಬಂಧವಿದೆ ಎಂಬ ಶಂಕೆಯಿಂದ ಕುಡಿತದ ಅಮಲಿನಲ್ಲಿ ಅಂಜುಳನ್ನು ಕೊಂದಿರುವುದಾಗಿ ಸಾಜು ತಪ್ಪೊಪ್ಪಿಕೊಂಡಿದ್ದ.

    ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ; ಭಾರತದ ಮೇಲೆ ಏನು ಪರಿಣಾಮ?

    ಕೆಟ್ಟರಿಂಗ್ ಜನರಲ್ ಆಸ್ಪತ್ರೆಯಲ್ಲಿ ಅಂಜು ನರ್ಸ್ ಆಗಿದ್ದಳು. ಡಿ.15ರಂದು ಅಂಜು ಕುಟುಂಬ ಮತ್ತು ಸ್ನೇಹಿತರು ಆಕೆಯನ್ನು ಸಂಪರ್ಕಿಸಲು ಮೊಬೈಲ್​ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಕೆಟ್ಟೆರಿಂಗ್​ ಪಟ್ಟಣದಲ್ಲಿಯೇ ನೆಲೆಸಿದ್ದ ಆಕೆಯ ಫ್ರೆಂಡ್ಸ್​ ಮನೆಯ ಬಳಿ ಬಂದು ನೋಡಿದಾಗ ಒಳಗಿನಿಂದ ಬಾಗಿಲು ಬಂದ್​ ಆಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದಾಗ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಅಮ್ಮ ಮತ್ತು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಂಜು ಸ್ಥಳದಲ್ಲೇ ಮೃತಪಟ್ಟಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅವರ ಪ್ರಾಣವನ್ನು ಕಾಪಾಡಲು ಸಾಧ್ಯವಾಗಲಿಲ್ಲ.

    ಮಹಿಳೆಯರಿಗಾಗಿ ಹುಡುಕಾಟ

    ಅಂಜು ಪತಿ ಸಾಜು, ಹೋಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ದಂಪತಿ ಯುಕೆಯಲ್ಲಿ ನೆಲೆಸಿದ್ದರು. ಪ್ರಾಸಿಕ್ಯೂಟರ್ ಜೇಮ್ಸ್ ನ್ಯೂಟನ್-ಪ್ರೈಸ್ ಕೆಸಿ ಅವರ ಪ್ರಕಾರ ಅಂಜು, ಅಕ್ರಮ ಸಂಬಂಧ ಹೊಂದಿದ್ದಳು ಎನ್ನುವುದಕ್ಕೆ ಯಾವುದೇ ಪುರಾವೆಗಳು ಇರಲಿಲ್ಲ ಎಂದು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಆರೋಪಿ ಸಾಜು ಫೋನ್ ಅನ್ನು ಪರಿಶೀಲಿಸಿದಾಗ, ಅವನು ತನ್ನ ಹೆಂಡತಿ ಕೆಲಸದಲ್ಲಿದ್ದಂತಹ ಸಮಯದಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಮಹಿಳೆಯರನ್ನು ಹುಡುಕುತ್ತಿದ್ದನು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಸದ್ಯ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. (ಏಜೆನ್ಸೀಸ್)

    ಬ್ರಿಟನ್​ನಲ್ಲಿ ಕೇರಳ ಮೂಲದ ನರ್ಸ್, ಆಕೆಯ ಮಕ್ಕಳಿಬ್ಬರ ದುರಂತ ಸಾವು: ಪತಿಯನ್ನು ವಶಕ್ಕೆ ಪಡೆದ ಪೊಲೀಸರು

    ಕಣ್ಣಿಗೊಂದು ಸವಾಲು: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ 4ನೇ ಬೆಕ್ಕನ್ನು ಪತ್ತೆಹಚ್ಚಿ!

    ಪೆನ್​ಡ್ರೈವ್​ ಹಿಡಿದು ವಿಧಾನಸೌಧಕ್ಕೆ ಎಚ್​ಡಿಕೆ ಎಂಟ್ರಿ: ಸ್ಫೋಟಗೊಳ್ಳುತ್ತಾ ಸಚಿವರೊಬ್ಬರ ಲಂಚದ ಆಡಿಯೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts