More

    ಬ್ರಿಟನ್​ನಲ್ಲಿ ಕೇರಳ ಮೂಲದ ನರ್ಸ್, ಆಕೆಯ ಮಕ್ಕಳಿಬ್ಬರ ದುರಂತ ಸಾವು: ಪತಿಯನ್ನು ವಶಕ್ಕೆ ಪಡೆದ ಪೊಲೀಸರು

    ಲಂಡನ್​: ಕೇರಳ ಮೂಲದ ನರ್ಸ್​ ಮತ್ತು ಆಕೆಯ ಇಬ್ಬರು ಮಕ್ಕಳು ಬ್ರಿಟನ್​ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಇಂಗ್ಲೆಂಡ್​ನ ನಾರ್ಥಾಂಪ್ಟನ್‌ಶೈರ್ ಕೌಂಟಿಯ ಕೆಟ್ಟೆರಿಂಗ್​ ಪಟ್ಟಣದಲ್ಲಿ ನಡೆದಿದ್ದು, ಮೃತಳ ಗಂಡನನ್ನು ಬ್ರಿಟನ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೃತರನ್ನು ಕೊಟ್ಟಾಯಂನ ವೈಕೋಮ್ ಮೂಲದ ಅಂಜು (40) ಮತ್ತು ಆಕೆಯ ಇಬ್ಬರು ಮಕ್ಕಳಾದ ಜಾನ್ವಿ (4) ಮತ್ತು ಜೀವಾ (6) ಎಂದು ಗುರುತಿಸಲಾಗಿದೆ. ಅಂಜು ಪತಿ ಕಣ್ಣೂರು ಮೂಲದ ಛಲೆವಲನ್​ ಸಜು (52) ಎಂಬಾತನನ್ನು ಕೊಲೆ ಮಾಡಿರುವ ಸಂಶಯದ ಮೇಲೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಗುರುವಾರ (ಡಿ.15) ಅಂಜು ಕುಟುಂಬ ಮತ್ತು ಸ್ನೇಹಿತರು ಆಕೆಯನ್ನು ಸಂಪರ್ಕಿಸಲು ಮೊಬೈಲ್​ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಕೆಟ್ಟೆರಿಂಗ್​ ಪಟ್ಟಣದಲ್ಲಿಯೇ ನೆಲೆಸಿದ್ದ ಆಕೆಯ ಫ್ರೆಂಡ್ಸ್​ ಮನೆಯ ಬಳಿ ಬಂದು ನೋಡಿದಾಗ ಒಳಗಿನಿಂದ ಬಾಗಿಲು ಬಂದ್​ ಆಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದಾಗ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಅಮ್ಮ ಮತ್ತು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

    ಅಂಜು ಸ್ಥಳದಲ್ಲೇ ಮೃತಪಟ್ಟಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅವರ ಪ್ರಾಣವನ್ನು ಕಾಪಾಡಲು ಸಾಧ್ಯವಾಗಲಿಲ್ಲ.

    ಅಂಜು ಬ್ರಿಟನ್​ನ ಕೆಟ್ಟೆರಿಂಗ್​ ಪಟ್ಟಣದ ಜನರಲ್​ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದಳು. ಆಕೆಯ ಪತಿ ಸಜು, ಹೋಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ದಂಪತಿ ಯುಕೆಯಲ್ಲಿ ನೆಲೆಸಿದ್ದರು. (ಏಜೆನ್ಸೀಸ್​)

    15 ರನ್​ಗೆ ಆಲೌಟ್: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್

    ಸರ್ಕಾರಿ ಕಾರ್ನರ್: ಇಲಾಖಾ ವಿಚಾರಣೆಗೆ 6 ತಿಂಗಳಷ್ಟೇ ಗಡುವು

    ಬಿಲಾವಲ್ ಬಣ್ಣಗೇಡು: ಪ್ರಧಾನಿ ಮೋದಿ ವಿರುದ್ಧ ಕೀಳುಪದ ಬಳಕೆ, ದೇಶಾದ್ಯಂತ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts