More

    15 ರನ್​ಗೆ ಆಲೌಟ್: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್

    ಸಿಡ್ನಿ: ಟಿ20 ಪಂದ್ಯಗಳೆಂದರೆ ರನ್​ಪ್ರವಾಹ ನಿರೀಕ್ಷಿಸಲಾಗುತ್ತದೆ. ಅಲ್ಲೇನಿದ್ದರೂ ಹೊಡಿ ಬಡಿ ಆಟಕ್ಕೆ ಮಾತ್ರ ಆದ್ಯತೆ. ಸಿಕ್ಸರ್​ ಮತ್ತು ಬೌಂಡರಿ ಸುರಿಮಳೆಯೇ ಸುರಿಯುವ ಟಿ20 ಮಾದರಿ ಪಂದ್ಯದಲ್ಲಿ ಪಂದ್ಯವೊಂದು ಸ್ಟಾರ್​ ಕ್ರಿಕೆಟಿಗರನ್ನು ಹೊಂದಿದ್ದರೂ ಕೇವಲ 15 ರನ್​ಗೆ ಆಲೌಟ್​ ಆಯಿತು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಆದರೆ ಆಸ್ಟ್ರೇಲಿಯಾದ ಬಿಗ್ ಬಾಷ್ ಟಿ20 ಲೀಗ್​ನಲ್ಲಿ ಶುಕ್ರವಾರ ಸಿಡ್ನಿ ಥಂಡರ್ ತಂಡ ಕೇವಲ 15 ರನ್​ಗಳಿಗೆ ಸರ್ವಪತನ ಕಂಡಿತು.

    ಅಡಿಲೇಡ್ ಸ್ಟ್ರೈಕರ್ ತಂಡದ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಸಿಡ್ನಿ ತಂಡ, ಹನ್ನೊಂದು ಬ್ಯಾಟರ್​ಗಳಿಂದ 0,0,3,0,2,1,1,0,0,4,1 ಹಾಗೂ ಇತರ 3 ರನ್ ಸೇರಿ ಒಟ್ಟು 15 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕನಿಷ್ಠ ಮೊತ್ತವಾಗಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ರ್ಟೈಕರ್ಸ್ 9 ವಿಕೆಟ್​ಗೆ 139 ರನ್ ಕಲೆ ಹಾಕಿತು. ಪ್ರತಿಯಾಗಿ ಸಿಡ್ನಿ ಥಂಡರ್ 5.5 ಓವರ್​ಗಳಲ್ಲಿ 15 ರನ್​ಗೆ ಸರ್ವಪತನ ಕಂಡಿತು. ಇದರೊಂದಿಗೆ ಅಡಿಲೇಡ್ ಸ್ರ್ಟೈಕರ್ಸ್ 124 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಸ್ರ್ಟೈಕರ್ಸ್ ಪರ ಹೆನ್ರಿ ಟೊರಾಟನ್ 17 ಎಸೆತಗಳಲ್ಲಿ 3 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ವೇಸ್ ಅಗರ್ 6 ರನ್ ನೀಡಿ 4 ವಿಕೆಟ್ ಪಡೆದರು.

    ಟಿ20 ಇತಿಹಾಸದ ಇದುವರೆಗಿನ ಅತ್ಯಂತ ಕನಿಷ್ಠ ಮೊತ್ತಗಳು
    1. ಸಿಡ್ನಿ ಥಂಡರ್​ vs ಅಡಿಲೇಡ್​ ಸ್ಟ್ರೈಕರ್ಸ್-15 ರನ್​​​ (2022)
    2. ಟರ್ಕಿ vs ಝೆಕ್​ ರಿಪಬ್ಲಿಕ್​- 21 ರನ್​ (2019)
    3. ಲೆಸೊಥೊ vs ಉಗಾಂಡಾ- 26 ರನ್​ (2021)
    4. ಟರ್ಕಿ vs ಲುಕ್ಸಂಬರ್ಗ್​- 28 ರನ್​ (2019)
    5. ಥೈಲ್ಯಾಂಡ್​ vs ಮಲೇಷಿಯಾ- 30 ರನ್​ (2022)

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

    ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

    ಪವಿತ್ರಾ ಲೋಕೇಶ್ ಬಳಿಕ ಕೆಲ ಯೂಟ್ಯೂಬರ್ಸ್​ಗೆ ಶಾಕ್​ ಕೊಟ್ಟ ನಟ ನರೇಶ್! ಕೋರ್ಟ್​ನಿಂದ ಹೊರಬಿತ್ತು ಆದೇಶ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts