More

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

    ಬೆಂಗಳೂರು: ಪಾಲಕರ ಜೊತೆ ಸೇರಿ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪದ ಮೇಲೆ ಅನುಭವ ಸಿನಿಮಾ ಖ್ಯಾತಿಯ ಹಿರಿಯ ನಟಿ ಅಭಿನಯಾ ಅವರಿಗೆ ಹೈಕೋರ್ಟ್​ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಕುರಿತು ಪ್ರತಿಕ್ರಯಿಸಿರುವ ಅಭಿನಯ ಅವರ ಅತ್ತಿಗೆ(ಸಹೋದರ ಶ್ರೀನಿವಾಸ್ ಪತ್ನಿ), ದೂರುದಾರೆ ಲಕ್ಷ್ಮೀದೇವಿ, ಬಡವರಿಗೆ ಕೋರ್ಟ್​ನಿಂದ ನ್ಯಾಯ ಸಿಕ್ಕಿದೆ ಎನ್ನುತ್ತಲೇ ತಾನು ಅನುಭವಿಸಿದ ನರಕಯಾತನೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ.

    ಗಂಡನ ಮನೆಯಲ್ಲಿ ನನಗೆ ಚಿತ್ರಹಿಂಸೆ ಕೊಡ್ತಿದ್ರು. ಸ್ನಾನಕ್ಕೆ ಒಂದೇ ಒಂದು ಬಕೆಟ್ ನೀರು ಕೊಡ್ತಾ ಇದ್ರು. ತಿನ್ನೋಕೆ ಒಂದೇ ರೊಟ್ಟಿ ಕೊಡ್ತಾ ಇದ್ರು. ಪರಪುರುಷರ ಜೊತೆ ಸಹಕರಿಸುವಂತೆ ಒತ್ತಾಯಿಸಿ ಹಿಂಸೆ ಕೊಡ್ತಿದ್ರು. ಮನೆಗೆ ಪರಪುರುಷರನ್ನ ಕರೆದುಕೊಂಡು ಬಂದು ಬಲವಂತ ಮಾಡ್ತಿದ್ರು. ನಾನು ಒಂದು ವರ್ಷ ಮಾತ್ರ ಗಂಡನ ಮನೆಯಲ್ಲಿ ಇದ್ದದ್ದು. ಅಭಿನಯ ಚಿತ್ರನಟಿಯಾದರೂ ನನಗೆ ಕಿರುಕುಳ ಕೊಡ್ತಾ ಇದ್ರು. ವರದಕ್ಷಿಣೆ ತಗೊಂಡು ಬನ್ನಿ ಅಂತ ಟಾರ್ಚರ್ ಕೊಡ್ತಿದ್ರು ಎಂದು ಹೇಳುತ್ತಾ ಲಕ್ಷ್ಮೀದೇವಿ ಕಣ್ಣೀರಿಟ್ಟರು.

    ನನ್ನ ಮದುವೆ ವೇಳೆ ಗಂಡನ ಮನೆಯವರಿಗೆ 1 ಲಕ್ಷ ರೂಪಾಯಿ, 250 ಗ್ರಾಂ ಚಿನ್ನ ಕೊಟ್ಟಿದ್ವಿ. ಮತ್ತೆ ಮನೆ ‌ಕಟ್ಟಲು ಹಣ ತನ್ನಿ ಅಂತ ಕಿರುಕುಳ ಕೊಡ್ತಾ ಇದ್ರು. ಬಡವರಿಗೆ(ನನಗೆ) ಕೋರ್ಟ್​ನಿಂದ ನ್ಯಾಯ ಸಿಕ್ಕಿದೆ. ಅಮ್ಮನ ಮನೆಯಲ್ಲಿ ಇದ್ದೀನಿ. ಅಮ್ಮ ಮನೆಯಲ್ಲಿ ಇದ್ರೆ ತಿಂತೀವಿ, ಇಲ್ಲಾಂದ್ರೆ ಉಪವಾಸ ಇರಬೇಕು. ನನಗೆ ಜೀವನಾಂಶ ಬಂದಿಲ್ಲ ಎಂದು ಲಕ್ಷ್ಮೀದೇವಿ ಕಣ್ಣೀರಿಟ್ಟರು.

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ
    ಶ್ರೀನಿವಾಸ್​ ಮತ್ತು ಲಕ್ಷ್ಮೀದೇವಿ ಮದುವೆಯಲ್ಲಿ ನಟಿ ಅಭಿನಯಾ

    ಘಟನೆ ಹಿನ್ನೆಲೆ ಏನು?: 2002ರಲ್ಲಿ ಲಕ್ಷ್ಮೀದೇವಿ ಎಂಬುವವರು ಅಭಿನಯಾ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯ ಅವರ ಅಣ್ಣ ಶ್ರೀನಿವಾಸ್ ಜತೆ ಕುಣಿಗಲ್​ ತಾಲೂಕಿನ ನಾರನಹಳ್ಳಿ ಗ್ರಾಮದ ಲಕ್ಷ್ಮೀದೇವಿ ಮದುವೆಯಾಗಿದ್ದರು. ಮದುವೆ ವೇಳೆ ವರಕ್ಷಿಣೆ ಪಡೆದಿದ್ದಲ್ಲದೆ, ನಂತರವೂ ಪದೇಪದೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ವಿವಾಹದ ಸಮಯದಲ್ಲಿ 80 ಸಾವಿರ ರೂಪಾಯಿ ಹಾಗೂ 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ಇದಾದ ನಂತರವೂ 1 ಲಕ್ಷ ರೂ.ಗೆ ಬೇಡಿಕೆ ಇಟ್ಟು 20 ಸಾವಿರ ಪಡೆದ ನಂತರವೂ ಕಿರುಕುಳ ಕೊಡುತ್ತಿದ್ದರು. ಹಣ ಕೊಟ್ಟರೂ ನನ್ನನ್ನು ಪಾಲಕರ ಮನೆಯಲ್ಲಿ ಬಿಟ್ಟಿದ್ದರು ಎಂದು ದೂರಿನಲ್ಲಿ ಲಕ್ಷ್ಮೀದೇವಿ ಆರೋಪಗಳ ಸುರಿಮಳೆಗೈದಿದ್ದರು.

    ಹೆರಿಗೆಗೆ ತವರು ಮನೆಗೆ ಹೋದ ಲಕ್ಷ್ಮೀದೇವಿಯನ್ನ ಮನೆಗೆ ಕರೆತರದ ಅಭಿನಯಾ ಫ್ಯಾಮಿಲಿ, ಗಂಡನ ಮನೆಗೆ ಬಂದ ಲಕ್ಷ್ಮೀ ಹಾಗೂ ಆಕೆಯ ಪಾಲಕರಿಗೆ ಅವಮಾನ ಮಾಡಿರುವ ಆರೋಪವೂ ಇದೆ. ಅಭಿನಯ ಸೇರಿ ಇಡೀ ಕುಟುಂಬದ ವಿರುದ್ಧ 2002ರಲ್ಲಿ ಚಂದ್ರಾಲೇಔಟ್ ಠಾಣೆಗೆ ಲಕ್ಷ್ಮೀದೇವಿ ದೂರು ದಾಖಲಿಸಿದ್ದರು. ಬಳಿಕ ವಿಚಾರಣೆ ನಡೆಸಿ, ಚಂದ್ರಾಲೇಔಟ್ ಪೊಲೀಸರು ಸಲ್ಲಿಸಿದ್ದ ಚಾರ್ಜ್​ಶೀಟ್​ ಆಧರಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್ ಎಲ್ಲಾ ಐವರು ಆರೋಪಿಗಳಿಗೂ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರು ಆರೋಪಿಗಳನ್ನೂ ಖುಲಾಸೆಗೊಳಿಸಿ ಆದೇಶಿಸಿತ್ತು.

    ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ. ಎ1 ಆರೋಪಿ ಶ್ರೀನಿವಾಸ್ ಹಾಗೂ ಎ2 ಆರೋಪಿ ರಾಮಕೃಷ್ಣ ಸಾವಿಗೀಡಾಗಿರುವ ಹಿನ್ನಲೆಯಲ್ಲಿ ಮೂವರಿಗೆ ಮಾತ್ರ ಜೈಲು ಶಿಕ್ಷೆ ಪ್ರಕಟಿಸಿದ್ದು, ಅಭಿನಯ ಅವರ ತಾಯಿ ಎ3 ಆರೋಪಿ ಜಯಮ್ಮಗೆ 5 ವರ್ಷ, ಎ4 ಆರೋಪಿ ಚಲುವರಾಜ್ ಹಾಗೂ ಎ5 ಆರೋಪಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಹೈಕೋರ್ಟ್​ ನ್ಯಾಯಮೂರ್ತಿ ಎಚ್​.ಬಿ. ಪ್ರಭಾಕರ್ ಶಾಸ್ತ್ರಿ ಅವರನ್ನೊಳಗೊಂಡ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಿದೆ. ಸರ್ಕಾರದ ಪರ ವಕೀಲ ಎಚ್.ವಿ. ವಿನಾಯಕ್ ಅವರು ವಾದ ಮಂಡಿಸಿದ್ದರು. (ದಿಗ್ವಿಜಯ ನ್ಯೂಸ್​)

    ಜಿಪಂ, ತಾಪಂ ಚುನಾವಣೆ ವಿಳಂಬ: ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

    ಶ್ರೀರಾಮುಲುಗೆ ಶಾಕ್​ ಕೊಟ್ಟ ವಜಾಗೊಂಡ ಬಿಎಂಟಿಸಿ ನೌಕರ: ಸಾರಿಗೆ ಸಚಿವರ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಲು ಸಜ್ಜು

    ತಂದೆಯನ್ನ ಕೊಂದು ಶವ ತುಂಡರಿಸಿ ಕೊಳವೆಬಾವಿಗೆ ತುರುಕಿದ ಮಗ! ಬಾಗಲಕೋಟೆಯಲ್ಲಿ ಭಯಾನಕ ಕೃತ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts